ಜ.21ರಂದು ಪರಮಾನಂದವಾಡಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

Share the Post Now

ಬೆಳಗಾವಿ

ರಾಯಭಾಗ :- ತಾಲೂಕಿನ ಪರಮಾನಂದವಾಡಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಇದೆ ಜನೆವರಿ 21,ರಂದು ನಡೆಯಲಿರುವ 6ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು .ಈ ಕುರಿತಾಗಿ ಎರಡನೇಯ ಹಂತದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.


ಈ ಸಭೆಯಲ್ಲಿ ಸಮ್ಮೇಳನದ ರೂಪ – ರೇಶಗಳನ್ನು ಚರ್ಚಿಸಲಾಗಿ ವಾಹನ ನಿಲುಗಡೆ ಸ್ಥಳ, ಸಮ್ಮೇಳನ ನಡೆಯುವ ಸ್ಥಳ, ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಸಾಗುವ ಮಾರ್ಗಗಳು, ಊಟದ ಸ್ಥಳ ಕವಿಗೋಷ್ಠಿಗಳು ಯಾವ್ಯಾವ ರೀತಿ ಆಗಬೇಕು, ಸ್ತಬ್ಧ ಭಾವಚಿತ್ರಗಳ ಮೆರವಣಿಗೆ ಹೇಗಿರಬೇಕು ಇನ್ನೂ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.


ಈ ಸಭೆಯಲ್ಲಿ ಆರ. ಎಂ.ಪಾಟೀಲ, ಬಿ.ಎಸ.ಸನದಿ, ಬಿ.ಎಂ.ಖ್ಯಾಸ್ತಿ , ಎಸ.ಎಲ.ಚೌರಿ, ಶಂಕರ ಹೊನವಾಡೆ, ಟಿ.ಎಸ. ವಂಟಗುಡೆ, ಗ್ರಾಮದ ಮುಖಂಡರಾದ ಎಸ.ಎಲ.ಭಾಂಡಿ, ಶಿಲಾಧರ ಗೌಡರ, ಪಿ ಎಸ.ಮಿರ್ಜಿ, ಅಪ್ಪು ಮುಖಾಸಿ, ಅರವಿಂದ ವಾಳಕೆ, ಮುಬಾರಕ ಡಾಂಗೆ, ಶಿವಾನಂದ ವಾಳಕೆ, ಚಿದಾನಂದ ಮಿಠಾರೆ, ಪ್ರಕಾಶ ಅಕ್ಕೋಳೆ, ಇನ್ನು ಹಲವಾರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ವರದಿ :ಶ್ರೀನಾಥ್ ಶಿರಗುಕರ

Leave a Comment

Your email address will not be published. Required fields are marked *

error: Content is protected !!