ಕೊಪ್ಪಳ :- ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ನೇತೃತ್ವದಲ್ಲಿ ಸ್ಪಿರಿಟ್ ಕರಾಟೆ ಅಕಾಡೆಮಿ ಮತ್ತು ಸೇವಾ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಶನ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಕ್ರೀಡಾಪಟುಗಳಾದ ಮಣಿಕಂಠ ಅಂತರ U-14 ವಯೋಮಿತಿಯ -45 KG ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ . ಅಂತರ U-17 ವಯೋಮಿತಿಯ ವಿಭಾಗದಲ್ಲಿ ಸಂಜನಾ-32 KG, ಅನುಷಾ-40 KG, ಮರ್ದಾನ ಅಲಿ – 40 KG, – ಶರಣಬಸವ -45 KG, ಕುಮಿಟೆ (ಫೈಟ್) ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಶಿವಮೊಗ್ಗದಲ್ಲಿ ನಡೆಯುವಂತಹ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ .
ಹಾಗೂ -35 KG, ವಿಭಾಗದಲ್ಲಿ ಸಲೀಮ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ನ ಮುಖ್ಯಸ್ಥರಾದ ಹಾಗೂ ಮುಖ್ಯ ತರಬೇತುದಾರರಾದ ಬಾಬುಸಾಬ ರವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ತರಬೇತುದಾರರಾದ ಅಂಬಿನಾಯಕ್ ಮತ್ತು ಪಾಲಕರಾದ ಶೀನಪ್ಪ, ತಿಪ್ಪಯ್ಯ ಸ್ವಾಮಿ, ಮಂಜುನಾಥ್, ಕನಕಪ್ಪ ಹುಡೇಜಾಲಿ,ಯೋಗೇಶ್, ಮಾಬೂಸಾಬ್ ರವರು ಹಾಗೂ ಊರಿನ ಗಣ್ಯವ್ಯಕ್ತಿಗಳು ವಿಜೇತರಾದ ಕ್ರೀಡಾಪಟುಗಳಿಗೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ .