ಹಳ್ಳೂರ.
ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ ಹುಣ್ಣಿಮೆ ನಿಮಿತ್ಯ ಕರಿ ಹರಿಯುವ ಕಾರ್ಯಕ್ರಮವು ನಡೆಯಿತು. ಪ್ರಾರಂಭದಲ್ಲಿ ಗ್ರಾಮದ ಅಗಸಿಯಲ್ಲಿ ಒಂದು ಜೋಡಿ ಹೋರಿಗಳು ಒಂದು ಕರಿ ಹೋರಿ ಒಂದು ಬಿಳಿ ಹೋರಿಗಳನ್ನು ಪೂಜೆ ಮಾಡಿ ಏಕ ಕಾಲದಲ್ಲಿ ಓಡಲು ಬಿಟ್ಟಾಗ ಕರಿ ಹೋರಿ ಮುಂದೆ ಬಂದಿದ್ದರಿಂದ ಮುಂಗಾರಿ ಅನ್ನುತ್ತಾರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಹಿಂದಿನಿಂದಲೂ ತಿಳಿದುಕೊಂಡ ಬಂದ ವಾಡಿಕೆಯಾಗಿದೆ. ನಂತರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜೋಡಿ ಹೋರಿಗಳಿಗೆ ಆರತೀ ಮಾಡಿದರು. ಈ ಸಮಯದಲ್ಲಿ ಗ್ರಾಮದ ಗುರು ಹಿರಿಯರಿದ್ದರು.