ಬೆಳಗಾವಿ
ವರದಿ. ಕಲ್ಲಪ್ಪಾ ಮಾಳಾಜ ಹುಕ್ಕೇರಿ
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾನವೀಯತೆ ಮೆರೆದ ಶ್ರೀಮತಿ ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೆಬಲ್ ಟ್ರಸ್ಟ ಬೆಲ್ಲದ ಬಾಗೇವಾಡಿ ಹಾಗೂ ವ್ಯಾಪಾರಿ ಸಂಘ ಮತ್ತು ವೀರಶೈವ ಸಮಾಜ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರ ದಿ18 02 2023 ರ ಬೆಳಿಗ್ಗೆ ಮಹಾವೀರ ಚೌಕದಲ್ಲಿನ ಶ್ರೀ ದಾದು ಖಾನಾಪುರೆ ಅವರ ಮಾಲಿಕತ್ವದ ಸ್ಟೆಶನರಿ ಅಂಗಡಿಗೆ ಸಿಲಿಂಡರ್ ಸ್ಫೋಟ ದಿಂದ ಅಗ್ನಿಅನಾಹುತ ಜರುಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ನಾಶವಾಗಿ ಅವರ ಜೀವನ ನಿರ್ವಹಣೆ ಕಠಿಣವಾಗಿತ್ತು. ಈ ಪರಿಸ್ಥಿತಿಯನ್ನು ಮನಗಂಡ ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷರು ,ನೆಚ್ಚಿನ ನಾಯಕರು ಆದ ಶ್ರೀ ರಮೇಶಣ್ಣಾ ಕತ್ತಿ ಅವರು ಶ್ರೀಮತಿ ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೇಬಲ್ ಟ್ರಸ್ಟ ಬೆ ಬಾಗೇವಾಡಿ ವತಿಯಿಂದ ರೂ 1,00,001/-,ವ್ಯಾಪಾರಿ ಸಂಘದ ವತಿಯಿಂದ ರೂ1,11,000/- , ವೀರಶೈವ ಲಿಂಗಾಯತ ಸಮಾಜದ ವತಿಯಿಂದ 50,000/-, ರೂಗಳ ಸಹಾಯ ಧನದ ಚೆಕ್ ಗಳನ್ನು ಬೆ ಬಾಗೇವಾಡಿಯ ನಿವಾಸದಲ್ಲಿ ಶ್ರೀ ದಾದು ಖಾನಾಪುರೆ ಮತ್ತು ಅವರ ಪುತ್ರ ರಾಹುಲ ಇವರಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬೆ ಬಾಗೇವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಗಂಗಾಧರ ನಾವಿ ,ಸದಸ್ಯರೂ ಹಿರಿಯರೂ ಆದ ಶ್ರೀ ಸಿದ್ದಲಿಂಗಯ್ಯ ಕಡಹಟ್ಟಿ, ವ್ಯಾಪಾರಿ ಸಂಘದ ಅಧ್ಯಕ್ಷ ಶ್ರೀ ಸುಧೀರ ಕತ್ತಿ , ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಶ್ರೀ ಅಶೋಕ ಬೆಲ್ಲದ, ಶ್ರೀ ಸುರೇಶ ಗಿಡಕತ್ತಿ, ಶ್ರೀ ಮುರುಗೇಶ ಕತ್ತಿ, ಶ್ರೀ ಮಾನಿಂಗ ಶೆಟ್ಟಿ, ಶ್ರೀ ಮಲ್ಲಿಕಾರ್ಜುನ ಕಣಗಲಿ, ಶ್ರೀ ಸಂದೀಪ ಕತ್ತಿ, ಶ್ರೀ ಸಂಗಮೇಶ ಕತ್ತಿ ಮತ್ತು ವ್ಯಾಪಾರಿ ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರು,ನಾಗರಿಕರು ಹಾಜರಿದ್ದರು.