ರಾಯಬಾಗ: ತಾಲ್ಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಕಾರ್ಮಿಕರ ದಿನಾಚರಣೆ ಸೋಮವಾರ ದಿ.1 ರಂದು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಸಾoಸ್ಕೃತಿಕ ಪರಿಷತ್ತು ರಾಯಬಾಗ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಮೂಡಲಗಿ ಆರ್ ಡಿ ಎಸ್ ಮಹಾವಿದ್ಯಾಲಯದ ಕನ್ನಡದ ಪ್ರಾಧ್ಯಾಪಕ ಸಾಹಿತಿ ಟಿ. ಎಸ್. ವಂಟಗೂಡಿ ಮಾತನಾಡಿ ಕಾರ್ಮಿಕರು ಶ್ರಮ ಜೀವಿಗಳು ಕಾಯಕವೇ ಕೈಲಾಸವೆಂದು ತಿಳಿದು ಹಗಲಿರುಳು ಶ್ರಮ ವಹಿಸಿ ದುಡಿಯುವ ಕಾರ್ಮಿಕರ ಕಾಯಕ ಶ್ಲಾಘನೀಯ. ಕಾಯಕ ಮಾಡುವವನೇ ನಾಯಕ ನಾಗುತ್ತಾನೆ. ದೇಶ ಅಭಿವೃದ್ಧಿಯ ಪಥದತ್ತ ಸಾಗಬೇಕಾದರೆ ಕಾರ್ಮಿಕರ ಸೇವೆ ಅಪಾರವಾದದ್ದು, ನಮಿಸುವ ಕೈಗಳಿಗಿಂತ ದುಡಿಯುವ ಕೈಗಳೇ ಶ್ರೇಷ್ಠ ಎಂದು ಸಾಹಿತಿ ಟಿ. ಎಸ್. ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಬೀರಪ್ಪ ತಡಸಲೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯ ಮೇಲೆ ಅಶೋಕ ಪೂಜೇರಿ ದೀಪಾ ಪೂಜೇರಿ ರಾಮು ವಂಟಗೂಡಿ ವಿಠ್ಠಲ ವಂಟಗೂಡಿ ಕರೆಪ್ಪ ವಂಟಗೂಡಿ ಮೀನಾಕ್ಷಿ ವಂಟಗೂಡಿ ತೇಜಶ್ವಿನಿ ವಂಟಗೂಡಿ ಲಕ್ಷ್ಮೀ ಕಿರಣಗಿ ಲಕ್ಷ್ಮೀ ಪೂಜೇರಿ ಉಪಸ್ಥಿತರಿದ್ದರು.ಜಡಿಸಿದ್ದ ವಂಟಗೂಡಿ ಸ್ವಾಗತಿಸಿದರು ಬಸವರಾಜ ಸತ್ತಿ ನಿರೂಪಿಸಿದರು ವಿನಯ ತಡಸಲೂರ ವಂದಿಸಿದರು.
*ವರದಿ:~ಡಾ.ಜಯವೀರ ಎ.ಕೆ. ಖೇಮಲಾಪುರ*