ಬೆಳಗಾವಿ. ಹುಕ್ಕೇರಿ
ವರದಿ -ರವಿ ಬಿ ಕಾಂಬಳೆ
ಹುಕ್ಕೇರಿ: ಪಟ್ಟಣದ ಗ್ರಾಮದೇವತೆಯಾದ ಶ್ರೀ ಲಕ್ಷ್ಮಿ ದೇವಿಯ ಜಾತ್ರೆಯು ಅತಿ ವಿಜೃಂಭಣೆಯಿಂದ ಹುಕ್ಕೇರಿ ಪೊಲೀಸರ ಶಿಸ್ತುಬದ್ಧ ಬಂದೋಬಸ್ತ್ ದಿಂದ ಶಾಂತಿಯುತವಾಗಿ ನಡೆಯಿತು. ಆದರೆ ಜಾತ್ರೆಯ ಮುಗಿಸಿಕೊಂಡು ಸಂಬಂಧಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವಾಗ ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನಾಲ್ಕು ಜನ ಮಹಿಳೆಯರ ಕತ್ತುಗಳಲಿದ್ದ ಬಂಗಾರ ಆಭರಣಗಳನ್ನು ಕದ್ದುಪರಾರಿಯಾಗಿದ್ದಾರೆ. ಮಹಿಳೆಯರು ತತಕ್ಷಣವಾಗಿ ಬಸ್ ನಿರ್ವಾಹಕರಿಗೆ ವಿಷಯ ತಿಳಿಸಿದ್ದರೂ ಕೂಡ ಬಸ್ಸನ್ನು ನಿಲ್ಲಿಸದೆ ಈ ಮಹಿಳೆಯರಿಗೆ ಸಹಾಯ ಮಾಡದೆ ಬಸನ್ನು ತೆಗೆದುಕೊಂಡು ಹೋಗಿದ್ದಾರೆ. ಅದು ಅಲ್ಲದೆ ಈ ಬಸ್ ನಿಲ್ದಾಣವು ನೂತನ ಕಟ್ಟಡವಾಗಿದ್ದು ಇಲ್ಲಿಯವರೆಗೆ ಈ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಲ್ಲ ಹೀಗಾಗಿ ಕಳ್ಳರನ್ನು ಹಿಡಿಯಲು ಹುಕ್ಕೇರಿ ಪೊಲೀಸರಿಗೆ ಸ್ವಲ್ಪ ಕಷ್ಟದ ಸಂಗತಿಯಾಗಿದೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನೂತನ ಬಸ್ ನಿಲ್ದಾಣಕ್ಕೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕು ಎಂದು ಹುಕ್ಕೇರಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.