ಸಾರ್ವಜನಿಕರ ದೂರಿನ ಮೇರೆಗೆ ಖಾನಾಪುರ ತಾಲೂಕಿನ ನಂದಗಡದಲ್ಲಿ ಯಾವುದೇ ಪದವಿ ಪಡೆಯದೆ ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಮಕ್ತುಮ್ ಮಾಲಾದರ ಎಂಬ ನಕಲಿ ವೈದ್ಯರ ಕ್ಲಿನಿಕ್ ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಮಹೇಶ್ ಕೋಣಿ, ಜಿಲ್ಲಾ ಆಯುಷ್ಯ ಅಧಿಕಾರಿಗಳಾದ ಡಾ ಸುಣ್ಣದೂಳ್ಳಿ, ತಾಲೂಕಾ ಅರೋಗ್ಯ ಅಧಿಕಾರಿಗಳಾದ ಕಿವಡಸಣ್ಣವರ ಬೇಟಿ ನೀಡಿ ಪರಿಶೀಲನೆ ಮಾಡಿ ಕೆಪಿಎಂಇ ನಿಯಮಗಳನ್ನು ಪಾಲಿಸದ ಆಸ್ಪತ್ರೆ ಯನ್ನು ಸಿಜ ಮಾಡಿದರು.
ನಂದಗಡದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳಿಗೆ ನಂದಗಡದ ಸಾರ್ವಜನಿಕರು ಲಿಖಿತ ದೂರು ಸಲ್ಲಿಸಿದ್ದರಿಂದ ಕೂಡಲೇ ಜಿಲ್ಲಾ ವೈಧ್ಯಾಧಿಕಾರಿಗಳ ಸಹಿತ ನಕಲಿ ವೈದ್ಯನ ಕ್ಲಿನಿಕ್ ಗೆ ತೆರಳಿ ಪರಿಶೀಲಿಸಿ ಸೀಜ ಮಾಡಿದರು. ತಾಲ್ಲೂಕಿನಾದ್ಯಂತ ಇಂತಹ ನೂರಾರು ವೈದ್ಯರು ಬಡವರ ರಕ್ತ ಹೀರುತ್ತಿದ್ದು ಅಂತವರ ಮೇಲೂ ಇಂತಹ ಕ್ರಮ ಕೈಗೊಳ್ಳಲಿ ಎನ್ನುವದು ಸಾರ್ವಜನಿಕರ ಆಶಯವಾಗಿದೆ.