ಬೆಳಗಾವಿ
ರಾಯಬಾಗ:* ತಾಲ್ಲೂಕಿನ ಸುಕ್ಷೇತ್ರ ಕೃಷ್ಣಾ ತೀರದ ಖೇಮಲಾಪುರ ಗ್ರಾಮದ ಬಂಡಾರದ ಒಡೆಯ,ಪವಾಡ ಪುರುಷ ಜಾಗೃತ ದೈವ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ಗುರುವಾರ ದಿ.07 ರಿಂದ ಸೋಮವಾರ ದಿ.11 ರ ವರೆಗೆ ನಡೆಯಲಿದೆ. ಮಹೋತ್ಸವದ ಅಂಗವಾಗಿ ಅನೇಕ ಸ್ಫರ್ಧೆಗಳು ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗುರುವಾರ ದಿ.07 ರಂದು ಬೆಳಿಗ್ಗೆ 9 ಗಂಟೆಗೆ ಪಗಡಿ ಸ್ಪರ್ಧೆ,ನಂತರ 10 ಗಂಟೆಗೆ ನಾಯಿ ಓಟದ ಸ್ಪರ್ಧೆ, ಶುಕ್ರವಾರ ದಿ.08 ರಂದು ಸ್ಲೋ ಸೈಕಲ್ ಸ್ಪರ್ಧೆ,ನಂತರ 10 ಗಂಟೆಗೆ ಸ್ಲೋ ಮೋಟಾರ್ ಸೈಕಲ್ ಸ್ಪರ್ಧೆ, ಬೆಳಿಗ್ಗೆ 10 ಗಂಟೆಗೆ ಪುರುಷರ ವಾಲಿಬಾಲ್ ಪಂದ್ಯಾವಳಿ, ಶನಿವಾರ ದಿ. 09 ರಂದು ಪುರುಷರ ಕಬಡ್ಡಿ ಪಂದ್ಯಾವಳಿ. ರಾತ್ರಿ 09 ಗಂಟೆಗೆ ಸ್ಥಳೀಯ ಶ್ರೀ ಅರಣ್ಯ ಸಿದ್ದೇಶ್ವರ ಯುವಕ ಸಂಘದ ಆಶ್ರಯದಲ್ಲಿ ಸಂಗೀತ ರಸಮಂಜರಿ ಹಾಗೂ ಹಾಸ್ಯ ರಸದೌತಣ ಕಾರ್ಯಕ್ರಮ ನಡೆಯಲಿದೆ. ರವಿವಾರ ದಿ.10 ರಂದು ಕುದುರೆ ಶರ್ಯತ್ತು,ಬೆಳಿಗ್ಗೆ 10 ಗಂಟೆಗೆ ರಂಗೋಲಿ ಸ್ಪರ್ಧೆ, ಮಧ್ಯಾಹ್ನ 3 ಗಂಟೆಗೆ ಅತ್ಯಾಕರ್ಷಕ ಡೊಳ್ಳಿನ ಸ್ಪರ್ಧೆ, ಸಂಜೆ 04 ಗಂಟೆಗೆ ಕೌಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜರು ಆಗಮಿಸಿ ಪ್ರವಚನ ನೀಡುವರು. ಸೋಮವಾರ ದಿ.11 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಅರಣ್ಯ ಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವ ಕೃಷ್ಣಾ ನದಿಗೆ ಹೋಗಿ ಬರುವುದು.ನಂತರ ಮಹಾಪ್ರಸಾದ ನಡೆಯುವುದು.
ಸಂಜೆ 4 ಗಂಟೆಗೆ ಮುದ್ದೇಬಿಹಾಳ ತಾಲ್ಲೂಕು ಹರನಾಳದ ಶ್ರೀ ಅಮೋಘ ಸಿದ್ದೇಶ್ವರ ಡೊಳ್ಳಿನ ಸಂಘ ಹಾಗೂ ದೇವರನಿಂಬರಗಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದ ಕಲಾವಿದರಿಂದ ಪ್ರಸಿದ್ಧ ಡೊಳ್ಳಿನ ಪದಗಳು ಪ್ರದರ್ಶನಗೊಳ್ಳಲಿವೆ. ಸಕಲ ಸದ್ಭಕ್ತರು ತನು ಮನ ಭಾವಗಳಿಂದ ಸೇವೆ ಸಲ್ಲಿಸಿ ಶ್ರೀ ಅರಣ್ಯ ಸಿದ್ದೇಶ್ವರ ದೇವರ ದಿವ್ಯ ಕೃಪಾಶೀರ್ವಾದ ಪಡೆದುಕೊಳ್ಳಬೇಕೆಂದು ಸದ್ಭಕ್ತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ವರದಿ:* *ಡಾ.ಜಯವೀರ ಎ.ಕೆ*
*ಖೇಮಲಾಪುರ*