ಬೆಳಗಾವಿ

ರಾಯಭಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಎಚ್ ವಿ ಎಚ್ ಮೈದಾನದಲ್ಲಿ ಧಾರವಾಡದ ರಂಗಾಯಣ ಕಲಾವಿದರಿಂದ ಹಾಗೂ ಕರ್ನಾಟಕ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಹಾಗೂ ಕುಡಚಿ ಶಾಸಕ ಪಿ ರಾಜೀವ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ರಂಗಭೂಮಿ ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರದರ್ಶನವನ್ನು ಹಾರೂಗೇರಿಯಲ್ಲಿ ಎಸ್ ಪಿ ಎಂ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಿತು
ಮೊದಲಿಗೆ ನಡೆದಾಡುವ ದೇವರು ಕೋಟ್ಯಂತರ ಭಕ್ತ ಸಾಗರವನ್ನು ಅಗಲಿದ ಶ್ರೀ ಸಿದ್ದೇಶ್ವರ ಶ್ರೀ ಗಳು ಅಗಲಿದ್ದರಿಂದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷಗಳ ಕಾಲ ಮೌನಾ ಚಾರಣೆ ಮಾಡಿಲಾಯಿತು
ನಂತರ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು
ವೀರ ರಾಣಿ ಕಿತ್ತೂರು ಚನ್ನಮ್ಮ ಬ್ರಹತ್ ನಾಟಕವನ್ನು ನಗಾರಿ ಭಾರಿಸುವ ಮೂಲಕ ವೇದಿಕೆಯ ಮೇಲೆ ಇದ್ದ ಗಣ್ಯರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವೇದಿಕೆಯ ಮೇಲೆ 250ಕ್ಕೂ ಹೆಚ್ಚು ಕಲಾವಿದರು ತಮ್ಮ ಪ್ರತಿಭೆಗೆ ತಕ್ಕಂತೆ ಅಭಿನಯ ಮಾಡಿ ಕಲೆಗೆ ಜೀವ ತುಂಬಿದರು HVH ಮೈದಾನ ದಲ್ಲಿ ಎಲ್ಲಿ ನೋಡಿದ್ದರಲ್ಲಿ ಜನಸಾಗರ ತುಂಬಿ ತುಳುಕುತಿತ್ತು ಹಿಂದಿನ ಇತಿಹಾಸ ದಲ್ಲಿ ಕಿತ್ತೂರು ಸಂಸ್ಥಾನದಲ್ಲಿ ಯಾವ ರೀತಿ ಆಳ್ವಿಕೆ ಇತ್ತು ಮುಂದೆ ಕುತಂತ್ರಿಗಳ ಕೈವಾಡದಿಂದ ಕಿತ್ತೂರು ಹೇಗೆ ಬ್ರಿಟಿಷ್ ರ ಕೈ ವಶವಾಯಿತು , ರಾಜರ ಪಟ್ಟಭಿಷೇಕ್,ಕುದರೆ, ಒಂಟೆ ಆನೆ ಕುದರೆ ಮೇಲೆ ಯುದ್ಧಗಳು ಹೀಗೆ ಹತ್ತು ಹಲವು ರೋಮಾಂಚಕಕಾರಿ ದ್ರಶ್ಯ ಗಳು ಕಂಡು ಬಂದವು
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಪೂಜ್ಯಶ್ರೀ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು,ಅರವಿಂದ್ ರಾವ್ ದೇಶಪಾಂಡೆ, ಕುಡಚಿ ಶಾಸಕ ಪಿ ರಾಜೀವ್ ಮಾತನಾಡಿದರು.
ಎಂ ಡಿ ಚುನಮರಿ,ಅಮರಸಿಂಹ ಪಾಟೀಲ್, ರಮೇಶ ಎಸ್ ಪರವಿನಾಯಕರ್, ಶಶಿಕಲಾ ಹುಡೇದ್ ಆಡಳಿತಧಿಕಾರಿಗಳು ರಂಗಾಯಣ ಧಾರವಾಡ, ಬೆಳಗಾವಿ ಶಾಸಕ ಅನಿಲ್ ಬೆನಕೆ ಸಂಜಯ್ ಪಾಟೀಲ್, ಮಾಜಿ ಶಾಸಕ ಅಭಯ ಪಾಟೀಲ್, ಡಿ ಸಿ ಸದಲಗಿ ಬಸನಗೌಡ ಪಾಟೀಲ್ .ಡಾ. ಜಂಬಗಿ






