ಕೊಕಟನೂರ:ಎಣ್ಣೆ ಏಟಲ್ಲಿ ಚಿಕ್ಕಪ್ಪನನ್ನೆ ಬರ್ಬರವಾಗಿ ಕೊಂದ ಮಗ!

Share the Post Now

ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ
ಕಳೆದ 20 ವರ್ಷಗಳಿಂದ ಜಮೀನು ವಿಚಾರವಾಗಿ ಜಗಳ

ಮೊದಲಿಗೆ ಎಣ್ಣೆ ಪಾರ್ಟಿ ಮಾಡಿ ನಂತರ ಕೊಂದೇ ಬಿಟ್ಟ ಮಗ

ಕೊಲೆ ಮಾಡಲು ಕಾರಣವೇನು ಗೊತ್ತಾ? ಈ ಘಟನೆ ನಡೆದಿದ್ದೆಲ್ಲಿ?
ಅಥಣಿ : ಆಸ್ತಿ ವಿಚಾರವಾಗಿ ಜಗಳ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ದಬದಬಹಟ್ಟಿ ಗ್ರಾಮದ ಕೇಶವ ಬೊಸಲೆ (47) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಖಂಡೊಬಾ ಬೊಸಲೆ (27) ಕೊಲೆ ಮಾಡಿದ ವ್ಯಕ್ತಿ. ಆರೋಪಿ ಹಾಗೂ ಕೊಲೆಯಾದ ದುರ್ದೈವಿ ದಬದಬಹಟ್ಟಿ ಗ್ರಾಮದ ನಿವಾಸಿಗಳು. ಕಳೆದ 20 ವರ್ಷಗಳಿಂದ ಜಮೀನಿನ ಸಲುವಾಗಿ ಚಿಕ್ಕಪ್ಪ ಹಾಗೂ ಮಗನ ಜೊತೆ ಜಗಳವಾಡುತ್ತಾ ಬಂದಿದ್ದಾರೆ. ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಲೆ ಇತ್ತು.
ನಿನ್ನೆ ಇಬ್ಬರು ದಾಯಾದಿಗಳು ಕೂಡಿ ಕೊಕಟನೂರ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ನಿನ್ನೆ ಮದ್ಯ ಸೇವನೆ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆ ಮಾಡಿದ ಆರೋಪಿ ಖಂಡೊಬಾ ಬೊಸಲೆ ಐಗಳಿಯನ್ನು ಪೋಲಿಸರು ಬಂಧಿಸಿದ್ದಾರೆ. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ರಾಶಿದ್ ಶೇಖ

Leave a Comment

Your email address will not be published. Required fields are marked *

error: Content is protected !!