ಕೊಟ್ಟೂರು:ಅಶೋಕಸ್ವಾಮಿ ಹೇರೂರ ಅವರಿಂದ ಚುನಾವಣಾ ಪ್ರಚಾರ

Share the Post Now


ಕೊಟ್ಟೂರು:ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್.ಸಿ.ಮೀಸಲು ಕ್ಷೇತ್ರದ
ಪಕ್ಷೇತರ ಅಭ್ಯರ್ಥಿ ಡಾ.ಎ.ಎ೦.ಎ.ಸುರೇಶ ಕುಮಾರ ಅವರ ಪರ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಕೈಕೊಂಡಿದ್ದಾರೆ.

ಹೇರೂರ ಅವರ ಜೊತೆಗೆ ಡಾ.ನಾಗಭೂಷಣ, ನ್ಯಾಯವಾದಿ ರಮೇಶ್, ಸಿ.ಚಿದಾನಂದ,ಔಷಧ ವ್ಯಾಪಾರಿ ಲೋಹಿತ ಐಲಿ,ಫ಼ಾರ್ಮಸಿಸ್ಟ ಸೋಮಶೇಖರಯ್ಯ ,ವರ್ತಕ ಬಸಯ್ಯ ಸ್ವಾಮಿ
ಶಿವನಗುತ್ತಿ ಅಭಿಷೇಕ ಸ್ವಾಮಿ, ಮನು ಶಾಸ್ತ್ರಿ
ಜೊತೆಯಲ್ಲಿದ್ದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ದಿಸಿರುವ
ಬೇಡ ಜಂಗಮ ಸಮಾಜದ ಡಾ.ಎ.ಎಮ್.ಎ.ಸುರೇಶ ಕುಮಾರ ಹಗರಿಬೊಮ್ಮನಹಳ್ಳಿ ನಿವಾಸಿಯಾಗಿದ್ದು,
ಮೂಲತಃ ಕೊಟ್ಟೂರು ತಾಲೂಕಿನ ಅಯ್ಯನಹಳ್ಳಿ ಗ್ರಾಮದವರು.

ಡಾ.ಸುರೇಶ ಅವರು ಬಿ.ಜೆ.ಪಿ.ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದರು. ಕೊನೆಯ ಹಂತದಲ್ಲಿ ಸದ್ರಿ ಪಕ್ಷಗಳ ಬಿ.ಫ಼ಾರ್ಮ ಕೈ ತಪ್ಪಿದ್ದರಿಂದ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ.ಅವರ ಚಿನ್ಹೆ ಅಟೋರಿಕ್ಷಾ ಅಗಿದ್ದು ಅವರೂ ಸಹ ಬೆಂಬಲಿಗರೊಂದಿಗೆ ಮತ ಯಾಚಿಸುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿರುವ ಡಾ.ಸುರೇಶ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ,ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಭಾರಿ ಮತಗಳ ಅಂತರದಲ್ಲಿ ಪುರಸಭೆಯಿಂದ ಆಯ್ಕೆಯಾಗಿದ್ದರು.

Leave a Comment

Your email address will not be published. Required fields are marked *

error: Content is protected !!