ಬೆಳಗಾವಿ.
ವರದಿ :ಸಚಿನ ಕಾಂಬಳೆ
ಕಾಗವಾಡ :ಕಾಗವಾಡ ಪಟ್ಟಣದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂಗೊಳ್ಳಿ ರಾಯಣ್ಣ ಉತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ವೀರಜ್ಯೋತಿ ಯಾತ್ರೆಯನ್ನುದ್ದೇಶಿಸಿ ತಾಲ್ಲೂಕು ದಂಡಾಧಿಕಾರಿ, ರಾಜೇಶ್ ಬುರ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಸಾಹಸ ಪ್ರವೃತ್ತಿ ಜಗತ್ತಿಗೆ ಪಸರಿಸಲು ನಾಡಿನಾದ್ಯಂತ ಸಂಚರಿಸುತ್ತಿರುವ ಈ ಅಮರ ಜ್ಯೋತಿಗೆ ಭೇದ-ಭಾವ ಮರೆತು ಅಧಿಕಾರಿಗಳು ಎಲ್ಲ ಜನಾಂಗದವರು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಎಂದಿಗೂ ತನಗಾಗಿ ತನ್ನ ಅಧಿಕಾರಕ್ಕಾಗಿ ಬದುಕಲಿಲ್ಲ. ನಾಡಿಗೆ ದೊರಕಿಸಿಕೊಡಲು ತನ್ನ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ತಹಸೀಲ್ದಾರ. ರಾಜೇಶ ಬುರ್ಲಿ ಬಿಇ ಓ. ಎಮ್ .ಆರ್ .ಮುಂಜೆ, ಸಿಡಿಪಿಓ ಸಂಜೆಯಕುಮಾರ ಸದಲಗಿ, ರಕ್ಷಣಾ ವೇದಿಕೆ ಅಧ್ಯಕ್ಷರ ಸಿದ್ದು ಒಡೆಯರ, ಶಿವಾನಂದ ನವಿನಾಳೆ, ರಮೇಶ ಚೌಗಲೆ, ಕಾಕಾ ಪಾಟೀಲ್,ಅಸ್ಲಾಂ ಜಮಾದಾರ, ಪ್ರವೀಣ್ ಪಾಟೀಲ್,ಸೇರಿದಂತೆ ಅನೇಕರು ಹಾಜರಿದ್ದರು.