ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ಉಪ ತಹಶೀಲ್ದಾರ್ ಎಸ್.ಜಿ. ದೊಡಮನಿ ನೆರವೇರಿಸಿದರು.
ನಂತರ ಪೊಲೀಸ್ ವಂದನೆ ಪಡೆದು ವೇದಿಕೆ ಕಾರ್ಯಕ್ರಮ ಜರುಗಿದವು ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸತ್ಕಾರ ನೆರವೇರಿಸಿದರು.
ನಂತರ ವಿವಿಧ ಶಾಲೆಗಳ ಮಕ್ಕಳಿಂದ ದೇಶ ಭಕ್ತಿ ಗೀತೆಗಳ ನೃತ್ಯಗಳು ಜರುಗಿದವು. ಅಲೋಕ ಶಿಂದೆ ಆತನ ಸಂವಿಧಾನ ಶಿಲ್ಪಿ ಡಾ. ಬಿ.ಆರ.ಅಂಬೇಡ್ಕರ ಅವರ ವೇಷದಲ್ಲಿ ಕಂಡರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ.ಮಾನೆ, ಎ.ಎಸ್.ಐ ಸುರೇಶ್ ಕಲ್ಯಾಣಪೂರಕರ, ಜುನ್ನೇದಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಕ್ಬಾಲ್ ಸತ್ತಾರ, ಕಂದಾಯ ನಿರೀಕ್ಷಕ ರಾಜು ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಐ.ಎನ.ಪಟೇಲ, ಸಿಆರಸಿ ಅಲ್ತಾಫ್ ಬಾಗೆ, ಜಯಕುಮಾರ್ ಸನದಿ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.