ಬೆಳಗಾವಿ. ರಾಯಬಾಗ
ಕುಡಚಿ : ಸಾಧನೆ ಅಂದರೆ ಇದು ಈ ಸಮಾಜದ ಬಗ್ಗೆ ಏನೆಂದು ಅರಿಯದ ಮುಗ್ಧ ಪುಟಾಣಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ, ಇದೊಂದು ಅಸಮಾನ್ಯವಾದ ದೈತ್ಯ ಸಾಧನೆ ಎಂದರೆ ಅತಿಶಯೋಕ್ತಿ ಎನಿಸದು.
ಇಂತಹ ಅಪರೂಪದ ಅಪೂರ್ವ ಸಾಧನೆಗೈದ ನಮ್ಮ ಕುಡಚಿಯ ಹೆಮ್ಮೆಯ ಪುಟಾಣಿ ವಿಹಾನ ಅಜೀತ ಕೋಳಿಗುಡ್ಡ ಅಂದಹಾಗೆ ಈ ಪುಟಾಣಿಯು ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಯಾಕೆ ದಾಖಲಾಯಿತು ಅಂದುಕೊಂಡೀರಾ, ಹಾಗಾದ್ರೆ ಇಲ್ಲಿ ಸ್ವಲ್ಪ ಕೇಳಿ, ಅದರ ಮುಂಚೆ ಈ ಪುಟಾಣಿಯ ಸಂಕ್ಷಿಪ್ತ ಪರಿಚಯ ಮಾಡೋಣ ಬನ್ನಿ.
ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಟಿಕನಾಳ ತೋಟದ ನಿವಾಸಿ ಡಾ. ಅಜೀತ ಕೋಳಿಗುಡ್ಡ ಹಾಗೂ ಡಾ. ವಂದನಾ ಅಜೀತ್ ಕೋಳಿಗುಡ್ಡ ದಂಪತಿಗಳ ಮುದ್ದಿನ ಸುಪುತ್ರ ಈ ಎರಡು ವರ್ಷ ನಾಲ್ಕು ತಿಂಗಳ ಪ್ರಾಯದ ವಿಹಾನ ಅಜೀತ ಕೋಳಿಗುಡ್ಡ.
ಡಾ. ಅಜೀತ ಕೋಳಿಗುಡ್ಡ ದಂಪತಿ ಕುಡಚಿ ನಿವಾಸಿಗಳಾಗಿ ಸದ್ಯ ವೈದ್ಯಕೀಯ ವೃತ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಂದು ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ತಂದೆ ತಾಯಿಗಳ ಪಾತ್ರ ಅತಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎನ್ನುವುದಕ್ಕೆ ವಿಹಾನ ಅಜೀತ ಕೋಳಿಗುಡ್ಡ ನೈಜ ಉದಾಹರಣೆಯಾಗಿದ್ದಾನೆ.
ವಿಹಾನ ಹುಟ್ಟಿ ಒಂದುವರೆ ವರ್ಷ ಆಗುತ್ತಿರುವಾಗಲೇ ಅವನಲ್ಲಿರುವ ಕ್ರಿಯಾಶೀಲತೆಯನ್ನು ಬಹಳ ಸೂಕ್ಷ್ಮ ಮನಸ್ಸಿನಿಂದ ಆತನ ತಾಯಿ ಡಾ.ವಂದನಾ ಕೋಳಿಗುಡ್ಡ ಅರಿತುಕೊಂಡರು. ಒಂದು ಸಲ ಹೇಳಿದ್ದನ್ನು ಹಾಗೇನೇ ನೆನಪಿಟ್ಟುಕೊಳ್ಳುವ ಜಾಣ್ಮೆಯನ್ನು ಗಮನಿಸಿದ ತಾಯಿ ಪುಟಾಣಿಯ ಕ್ರಿಯಾಶೀಲತೆಗೆ ಅನುಗುಣವಾಗಿ ಮುಂದೆ ಎರಡು ವರ್ಷ ಆಗುತ್ತಿದ್ದಂತೆಯೇ, ಅವನಿಗೆ ಸಾಧ್ಯವಾದಷ್ಟು ತರಬೇತಿಯನ್ನು ನೀಡಿದರು. ಹೀಗೆ ಬೆಳೆದ ಈ ಪುಟಾಣಿ ವಾರದ ಹೆಸರು, ತಿಂಗಳ ಹೆಸರು, ಚಿತ್ರ ನೋಡಿ ವಿವಿಧ ಪ್ರಾಣಿಗಳ ಹೆಸರು, ವಿವಿಧ ಪಕ್ಷಿಗಳ ಹೆಸರು, ಹಣ್ಣುಗಳ ಹೆಸರು , ತರಕಾರಿಗಳ ಹೆಸರು,ವಾಹನಗಳ ಹೆಸರು, ವಿವಿದ ರೀತಿಯ ವೃತ್ತಿಗಳನ್ನು ಗುರುತಿಸುವುದು ,ವಿವಿಧ ವೃತ್ತಿಯನ್ನು ಹೇಳುವುದು, ಬಣ್ಣಗಳನ್ನು ಗುರುತಿಸುವುದು,ಕನ್ನಡ ವರ್ಣಮಾಲೆಗಳನ್ನು ಹೇಳುವುದು,ವಿವಿಧ ವಿಜ್ಞಾನಿಗಳನ್ನು ಗುರುತಿಸುವುದು, ವೈದ್ಯಕೀಯ ಉಪಕರಣಗಳನ್ನು ಗುರುತಿಸುವುದು, ಔಷಧಿಗಳನ್ನು ಗುರುತಿಸುವುದು, 123 puzzle ,ABCD Puzzle ,shapes puzzle ಬಿಡಿಸುವದನ್ನು ಕರಗತ ಮಾಡಿಕೊಂಡು ಸಾಧನೆಯ ಸಾಧಕನಾಗುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾನೆ ವಿಹಾನ.
ಪುಟಾಣಿಯ ಸಾಧನೆಗೆ ಸರಿಯಾದ ಸಮಯದಲ್ಲಿ ಪರಿಪಕ್ವವಾಗಿ ಬೆಳೆಯುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಡಾ. ಅಜೀತ ಕೋಳಿಗುಡ್ಡ ದಂಪತಿ ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ವಿಹಾನನ ಸಾಧನೆ ಎಂದು ಜಗದಗಲಕ್ಕೆ ಪಸರಿಸಿದೆ. ಸಾಧನೆಗೆ ಮತ್ತಷ್ಟು ಕೀರ್ತಿ ಎಂಬಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ವಿಹಾನ ಅಜೀತ ಕೋಳಿಗುಡ್ಡ ಹೆಸರು ದಾಖಲಾಗಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಎರಡು ವರ್ಷ ನಾಲ್ಕು ತಿಂಗಳ ಪುಟಾಣಿಯ ಹೆಸರು ದಾಖಲಾಗುವುದು ಪುಟ್ಟ ಪುಟಾಣಿಯ ಬಹುದೊಡ್ಡ ಸಾಧನೆಯೆ ಆಗಿದೆ. ಇತನ ಸಾಧನೆ ಕೇವಲ ಆತನ ಕುಟುಂಬಕ್ಕೆ ಗೌರವದ ಜೊತೆಜೊತೆಯಲ್ಲಿ ನಮ್ಮ ಹೆಮ್ಮೆಯ ಕರ್ಮ ಭೂಮಿ ಕುಡಚಿಗೆ ಬಹುದೊಡ್ಡ ಹೆಮ್ಮೆ ಮತ್ತು ಗೌರವವನ್ನು ತಂದುಕೊಟ್ಟಿದೆ.
ವಿಹಾನ ಅಜೀತ ಕೋಳಿಗುಡ್ಡ ಈ ಸಾಧನೆಗೆ ಪ್ರೇರಣಾದಾಯಿಗಳಾಗಿ ತಂದೆ ತಾಯಿ ಹಾಗೂ ಈ ಪುಟಾಣಿಯ ಚೈತನ್ಯದಾಯಕ ಕ್ರಿಯಾಶೀಲತೆಗೆ ಅಜ್ಜ, ಅಜ್ಜಿ ,ಚಿಕ್ಕಪ್ಪ ಅವರುಗಳ ಅಕ್ಕರೆಯ ಆಶೀರ್ವಾದ ಮತ್ತು ಕುಟುಂಬಸ್ಥರ ಪ್ರೀತಿಯ ಪ್ರೋತ್ಸಾಹವು ಬಹುಮೂಲ್ಯ ಕೊಡುಗೆಯಾಗಿದೆ.
ಈ ಪುಟಾಣಿಯ ಸಾಧನೆಗೆ ತಂದೆ ತಾಯಿ ಕುಟುಂಬಸ್ಥರು ಆಶೀರ್ವದಿಸಿ. ಈ ಪುಟಾಣಿ ನಮ್ಮೂರ ಹೆಮ್ಮೆ, ನಮ್ಮೂರ ಗೌರವ, ನಮ್ಮೂರ ಕೀರ್ತಿ, ವಿಶ್ ಯು ಆಲ್ ದಿ ಬೆಸ್ಟ್ ವಿಹಾನ್
ವಿ ಸೂ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಹಾಕಿದ ಎಲ್ಲಾ ಅರ್ಜಿಯೂ ಸ್ವೀಕರಿಸುದಿಲ್ಲ ಅವರಿಗೆ ಏನಾದರೂ ವಿಶೇಷವಾದ ಟ್ಯಾಲೆಂಟ್ ಅನಿಸಿದರೆ ಮಾತ್ರ ಅವರು ಆ ಅರ್ಜಿಯನ್ನು ಸ್ವೀಕರಿಸಿ ಅದಕ್ಕೆ ಪೂರಕವಾಗಿ ಬೇಕಾಗುವ ಎಲ್ಲ ಪ್ರೂಫ್ ಗಳನ್ನು ಆನ್ಲೈನ್ ಮೂಲಕ ಅಥವಾ ವಿಡಿಯೋಸ್ ಮೂಲಕ ಪರೀಕ್ಷಿಸಿ ನಂತರ ಒಪ್ಪಿಗೆ ಕೊಡುತ್ತಾರೆ.

ವರದಿ :ಸಂಜೀವ್ ಬ್ಯಾಕುಡೆ