ಕುಡಚಿ:ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಮುಖ್ಯವಾಗಿದೆ ಘಂಟಿ ಮಹಾರಾಜರು

Share the Post Now

ಬೆಳಗಾವಿ. ರಾಯಬಾಗ


ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಬಹು ಮುಖ್ಯವಾಗಿದೆ ಏಕೆಂದರೆ ಯಶಸ್ವಿ ಜೀವನ ಹಣ ಕಾರು ಬಂಗ್ಲಿ ಇದೆಲ್ಲ ನಮ್ಮಿಂದ ಆಗಿದೆ ಆದರೆ ನೀವು ಎಷ್ಟು ನೆಮ್ಮದಿಯಿಂದ ತೃಪ್ತಿಯಿಂದ ಇದ್ದಿರಿ ಎಂಬುದಕ್ಕೆ ನಿಮ್ಮ ಆತ್ಮ ನಿಮ್ಮ ಹೃದಯ ಹೇಳುತ್ತದೆ ಎಂದು ರಾಯಬಾಗ ತಾಲೂಕಿನ ಹಾಲಶಿರಗೂರದ ಪ್ರಥಮ ದರ್ಜೆ ಗುತ್ತಿಗೆದಾರ ಸದಾಶಿವ ದಳವಾಯಿ ಅವರು ತಂದೆ ಭರಮಪ್ಪ ದಳವಾಯಿಯವರ 36ನೇ ಹಾಗೂ ತಾಯಿ ಸಿದ್ಲಿಂಗವ್ವ ಅವರ 12ನೇ ಪುಣ್ಯರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರದೀಪ್ ಘಂಟಿ ಮಹಾರಾಜರು ಮಾತನಾಡಿದರು.

ನಂತರ ಹಿರಿಯ ಧುರೀಣ ಡಿ.ಎಸ.ನಾಯಿಕ ಮಾತನಾಡಿ  ಅವರು ಮಾಡಿದ ಪುಣ್ಯವನ್ನು ಇವತ್ತಿಗೂ ನಾವು ಸ್ಮರಿಸಬಹುದು  ಇವರು ಮಾಡಿದ ಘಳಿಕೆ‌ ಇವತ್ತಿಗೂ ಸಮಾಜಕ್ಕೆ ಬೆಳಕಾಗಿದೆ.   ಪುಣ್ಯ ಎಂದರೆ ಪರೋಪಕಾರ ಪಾಪ ಎಂದರೆ ಪರಪೀಡನೆ ಈ ಭೂಮಿಯ ಮೇಲೆ ಹುಟ್ಟಿದ ಎಲ್ಲ ಜೀವಿಗಳ ಬಗ್ಗೆ ಕಾಳಜಿ ಹಿತ ಚಿಂತಕ ಮಾಡಿದಾಗ ಅದೇ ಪರಪಕಾರವಾಗುತ್ತದೆ
ಎಂದರು.

ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ.ವಿದ್ಯಾ ಅಕ್ಕನವರು ಸಾನಿಧ್ಯ ವಹಿಸಿ  ಇವತ್ತಿನ ಆಧುನಿಕ ಜಗತ್ತಿನಲ್ಲಿ ಎಲ್ಲರಿಗೂ ಎಲ್ಲದರ ಜ್ಞಾನ ಇದೆ ಆದರೆ ನಾನು ಯಾರು ನನ್ನ ಕರ್ತವ್ಯ ಏನು ನಾನು ಮಾಡಬೇಕಾದ ಕಾರ್ಯ ಏನು ಎಂಬುದನ್ನು ಯಾರಿಗೂ ತಿಳಿದಿಲ್ಲ ಎಂದರು.

ನಂತರ ನೆರೆದ ನೂರಾರು ಜನರಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಸದಾಶಿವ ದಳವಾಯಿ, ಶಂಕರ್ ದಳವಾಯಿ, ದಸ್ತಗೀರ ಕಾಗವಾಡೆ, ಚೇತನ್ ದಳವಾಯಿ ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!