ಬೆಳಗಾವಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಉಪ ತಹಶೀಲ್ದಾರ್ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಎಸ್.ಜಿ.ದೊಡಮನಿ ನೇತೃತ್ವದಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಕರೆದು ಸಂಭ್ರಮದ ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು.
ಅಂದು ಬೆಳಿಗ್ಗೆ 9ಗಂಟೆಗೆ ಜುನ್ನೇದಿಯಾ ಪ್ರೌಢಶಾಲೆ ಆವರಣದಲ್ಲಿ ಎಲ್ಲ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಿಂದ ಗಣರಾಜ್ಯೋತ್ಸವ ಆಚರಿಸುವಂತೆ ನಿರ್ದೇಶನ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಎಲ್ಲ ಇಲಾಖೆಗಳ, ಶಾಲಾ ಪ್ರಮುಖರು, ಸಂಘಸಂಸ್ಥೆಗಳ ಸಲಹೆ ಸೂಚನೆ ಪಡೆದು, ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ, ಸಂವಿಧಾನದ ಪೀಠಿಕೆ ಓದುವುದು, ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತು ಭಾಷಣ, ನಂತರ ಅನುಕ್ರಮವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಮಕ್ಕಳಿಗೆ ಅತಿಥಿಗಳಿಗೆ ಅಲ್ಪೋಪಹಾರ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ತನಿಖಾ ಪಿಎಸ್ಐ ಎಸ್.ಬಿ.ಖೋತ, ಕಂದಾಯ ನಿರೀಕ್ಷಕ ಬಸವರಾಜ ದಾನೋಳಿ, ಪುರಸಭೆ ಸಮುದಾಯ ಅಧಿಕಾರಿ ಎಸ.ಬಿ.ಕದಮ, ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಸಿಆರಪಿಗಳಾದ ಅಲ್ತಾಫ್ ಬಾಗೆ, ಇಕ್ಬಾಲ್ ಉಮರಖಾನ, ಜಯಕುಮಾರ್ ಸನದಿ, ಪ್ರಸಾದ್ ಶಿಂಗೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇತರರು ಉಪಸ್ಥಿತರಿದ್ದರು