ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಖೇಮಲಾಪೂರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ತೋಟದ ಶಾಲೆ ನಡೆದ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರ ಹಸ್ತದಿಂದ ಸಾವಿರ ರೂಪಾಯಿ ಬಾಂಡ್ ಹಾಗೂ ಶಾಲಾ ಪರಿಕರ ವಿತರಣೆ.
ದಾಖಲಾತಿ ಆಂದೋಲನ ಅಡಿಯಲ್ಲಿ ಸರಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಪಡೆಯಲು ಶಾಲಾ ಸುಧಾರಣಾ ಸಮಿತಿ ಹಾಗೂ ಶಾಲಾ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಹೊಸದಾಗಿ ದಾಖಲಾತಿ ಪಡೆದ 18 ವಿದ್ಯಾರ್ಥಿಗಳಿಗೆ ತಲಾ ರೂ.1000 ರೂಪಾಯಿ ಮೊತ್ತದ ಬಾಂಡ, ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್, ಜಾಮಿಟ್ರಿ ಬಾಕ್ಸ, ನೋಟ್ ಬುಕ್, ನೀರಿನ ಬಾಟಲ್ ಎರಡು ಪೆನ್ನು ಸೇರಿದ ಪರಿಕರಗಳನ್ನು ಶಾಸಕರ ಹಸ್ತದಿಂದ ವಿತರಣೆ ಮಾಡಿದರು.
ಬಾಂಡ್ ಪಡೆದ ವಿದ್ಯಾರ್ಥಿ ಏಳು ವರ್ಷಗಳ ವಿದ್ಯಾಭ್ಯಾಸ ಮಾಡಿ ದ್ವಿಗುಣ ಹೊಂದಿದ ನಂತರ ಹಣ ಪಡೆಯುವಂತೆ ನಿಗದಿ ಪಡಿಸಲಾಗಿದೆ.
ದಾಖಲಾತಿಗೆ ಶ್ರಮಿಸುತ್ತಿರುವ ಶಾಲಾ ಸುಧಾರಣಾ ಸಮಿತಿ ಹಾಗೂ ಶಿಕ್ಷಕರ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ ಶಾಲೆಯ ಕುಂದುಕೊರತೆಗಳನ್ನು ಆಲಸಿ ಶೀಘ್ರದಲ್ಲೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ನಾನಾಜಿ ಹಾಲಪ್ಪನವರ, ಮುಖ್ಯೋಪಾಧ್ಯಾಯ ಛತ್ರ ನಾಯಕ, ಉಮಾ ಸದಲಗಿ, ರಾಮು ಗಾಣಿಗೇರ, ವರ್ಧಮಾನ ಶಿರಹಟ್ಟಿ, ಸೋಮನಾಥ ಪೂಜೇರಿ, ಸಚಿನ ಹಳಕಲ್ ಶಿಕ್ಷಕರು, ಶಾಲಾ ಸುಧಾರಣಾ ಸಮಿತಿ ಸದಸ್ಯರು ಇತರರು ಉಪಸ್ಥಿತರಿದ್ದರು





