ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ
ರಾಯಬಾಗ ತಾಲೂಕಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಚಿತ್ರಕಲೆಯಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಆದಿನಾಥ ಮುಲಾಜೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಶುಕ್ರವಾರ ಕನ್ನಡ ಪಬ್ಲಿಕ್ ಶಾಲೆ ನಿಲಜಿಯಲ್ಲಿ ನಡೆದ ರಾಯಬಾಗ ತಾಲೂಕಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯಲ್ಲಿ ಚಿತ್ರಕಲೆಯಲ್ಲಿ ಸಮೀಪದ ಗುಂಡವಾಡ ಗ್ರಾಮದ ಶ್ರೀ ವಿದ್ಯಾಲಯ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಆದಿನಾಥ ಮಲಾಜೆ ಇವರು ಪ್ರಥಮ ಸ್ಥಾನ ಪಡೆದರು.
ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ನದಾಫ ಸರ ಸೇರಿದಂತೆ ಇತರರು ಪ್ರಮಾಣ ಪತ್ರ ವಿತರಣೆ ಮಾಡುವ ಮೂಲಕ ಗೌರವಿಸಿದರು.