ರಾಯಬಾಗ :ತಾಲೂಕಿನ ಕುಡಚಿ ಪಟ್ಟಣದ ಶ್ರೀ ಬೀರೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ನೂತನ ಸ್ವಂತ ಕಟ್ಟಡದ ವಾಸ್ತು ಶಾಂತಿ ಹಾಗೂ ಹೋಮ ಪೂಜಾ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗಿಯಾದರು.
ಹಲವು ವರ್ಷಗಳಿಂದ ಬಾಡಿಗೆ ಕುಡಚಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬೀರೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿಯು ತಮ್ಮದೇಯಾದ ಸ್ವಂತ ಕಟ್ಟಡವನ್ನು ನಿರ್ಮಿಸಿ ಬುಧವಾರ ಹೋಮ ಹಾಗೂ ವಾಸ್ತು ಶಾಂತಿ ಪೂಜೆ ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಂತೋಷ ಸಿಂಗಾಡಿ, ಉಪ ಪ್ರಧಾನ ವ್ಯವಸ್ಥಾಪಕ ಎಸ್.ಕೆ.ಮಾನೆ, ಸದಾಶಿವ ಕಬಾಡೆ, ಸುಭಾಶ್ ಕಟ್ಟಿಕಾರ, ಮೋಹನ ನೇಸರಗಿ, ಶಂಕರ ಮಾನೆ ಶಾಖೆ ಸಲಹಾ ಸಮಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು





