ಕುಡಚಿ:ಘನತ್ಯಾಜ್ಯ ವಾಸನೆ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ  ಮುಖ್ಯಾಧಿಕಾರಿಗೆ ಮನವಿ.

Share the Post Now

ವರದಿ :ಸಂಜೀವ್ ಬ್ಯಾಕುಡೆ


ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪುರಸಭೆ ಘನತ್ಯಾಜ್ಯ ಘಟಕ ಅವ್ಯವಸ್ಥೆಯಿಂದ ಪ್ರದೇಶದಲ್ಲಿ  ದುರ್ಗಂಧ ವಾಸನೆ, ಕೊಳಚೆ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕೂಡಲೆ ಕ್ರಮ ವಹಿಸುವಂತೆ ಗ್ರಾಮೀಣ ವಾರ್ಡ್ ನಂ. 5ರ ನಿವಾಸಿಗಳು ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ ಅವರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಕುಡಚಿ ಗ್ರಾಮೀಣ ಭಾಗದ ವಾರ್ಡ್ ನಂ. 5ರಲ್ಲಿ ನಿರ್ಮಿಸಿದ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕವು ಅವ್ಯವಸ್ಥೆಯಿಂದ ಕೂಡಿದ್ದು ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ನಿತ್ಯದ ವೇತನೆ ಅನುಭವಿಸುವಂತಾಗಿದೆ.

ಕಸ ವಿಲೇವಾರಿ ಘಟಕದಲ್ಲಿ ಹಲವಾರು ವರ್ಷಗಳಿಂದ ಕುಡಚಿ ಪಟ್ಟಣದ ಎಲ್ಲ ರೀತಿಯ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯುತ್ತಾರೆ ಆದರೆ ಯಾವುದೇ ರೀತಿಯ ಸ್ವಚ್ಚತೆಯ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಹಾಗೂ ಸರ್ಕಾರದ ನಿಯಮದ ಪ್ರಕಾರ ತ್ಯಾಜ್ಯವಸ್ತುಗಳನ್ನು ನಾಶ ಪಡಿಸದೇ ಇರುವುದರಿಂದ ಕಸ ವಿಲೇವಾರಿ ಘಟಕದಲ್ಲಿ ತ್ಯಾಜ್ಯವಸ್ತು ಹೆಚ್ಚಾಗಿ ಪಕ್ಕದಲ್ಲಿ ಇರುವ ನಿಸಾರಅಹ್ಮದ ಮುಜಾವರ ಎಂಬುವರ ಹಾಲಿನ ಡೇಅರಿ ತ್ಯಾಜ್ಯವು ನೇರವಾಗಿ ತಂದು ಹಾಕುವುದರಿಂದ ವಾಸನೆ ನಿರ್ಮಾಣವಾಗಿ ನೋಣ, ಕೀಟಗಳು, ನಾಯಿಗಳ ಹಾವಳಿಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಅದು ಅಲ್ಲದೇ ಸದರಿ ಕಸ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ವಸ್ತುಗಳನ್ನು ಆಯುವರು ಪ್ಲಾಸ್ಟಿಕ್ ಹುಡುಕಲು ಬಂದು ತ್ಯಾಜ್ಯವಸ್ತುಗಳಿಗೆ ಬೆಂಕಿ ಹಚ್ಚುತ್ತಾರೆ. ಇದರಿಂದ ವಾರುಗಟ್ಟಲೆ  ಪ್ಲಾಸ್ಟಿಕ್‌ನ ಹೊಗೆಯಿಂದ ವಾಯು ಮಾಲಿನ್ಯ ಉಂಟಿಗಿ ಸಾರ್ವಜನಿಕರಿಗೆ ಉಸಿರಾಡಲು ತುಂಬಾ ತೊಂದರೆ ಉಂಟಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಇದರಿಂದ ಬೇಸತ್ತ ಸ್ಥಳೀಯರು ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿಕೊಂಡರು ಅಧಿಕಾರಿಗಳು ಪೊಳ್ಳು ಭರವಸೆ ನೀಡಿ ಯಾವುದೇ ಪ್ರತಿಕ್ರಿಯೆ ಕೈಗೊಂಡಿರುವುದಿಲ್ಲ.

ಸುತ್ತಲೂ ಮನೆಗಳು ಇರುವುದರಿಂದ ಈ ಭಾಗದ ಚಿಕ್ಕ ಮಕ್ಕಳು, ಶಾಲಾ ಮಕ್ಕಳು, ಯುವಕರು ಹಾಗೂ ವೃದ್ಧ ಜನರು ಹಾದು ಹೊಡೆಯುವುದರಿಂದ ಕೆಟ್ಟ ವಾಸನೆ, ನಾಯಿಗಳ ಹಾವಳಿಯಿಂದ ಜನರು ಕೈಯಲ್ಲಿ ಜೀವ ಹಿಡಿದು ತಿರುಗಾಡುವ ಪರಿಸ್ಥಿತಿ ಒದಗಿದ್ದು ಸಂಬಂಧಪಟ್ಟ ಅಧಿಕಾರಿಗಳು, ಮಾಲಿನ್ಯ ಇಲಾಖೆಯವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಪುರಸಭೆ ಅಧ್ಯಕ್ಷ ಹಮಿದ್ದೋದಿನ ರೋಹಿಲೆ, ಉಪಾಧ್ಯಕ್ಷ ಶಿವಪ್ಪ ಗಸ್ತಿ, ನ್ಯಾಯವಾದಿ ಕೆ.ಎಲ.ಕೆರೂರೆ, ಗಜಾನನ ಜಗದಾಳೆ, ಆನಂದ ಜಗದಾಳೆ, ಅಲ್ಲಾವುದ್ದೀನ ಮುಂಗುಸ,ದಾದೇಪಾಶಾ ಮುಂಗುಸ,ಮಹೇಶ ಮನಗುತ್ತಿ,ಭೀಮ ಮನಗುತ್ತಿ, ಮೋಹನ,  ಮನಗುತ್ತಿ, ನಬಿಸಾಹೇಬ ಬಾಗೆ, ಜೈರೊದೀನ ಬಾಗೆ, ಅಬುಲಖೈರ ಬಾಗೆ, ಭೀಮಪ್ಪ ದರಬಾರೆ ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!