ಐದು ತಿಂಗಳ ಅತಿಥಿ ಶಿಕ್ಷಕರ ವೇತನ ಬಿಡುಗಡೆಗಾಗಿ ಕುಡಚಿ ಶಾಸಕರಿಗೆ ಮನವಿ

Share the Post Now

ಬೆಳಗಾವಿ


ರಾಯಬಾಗ.
ರಾಜ್ಯಾದ್ಯಂತ ಸರಕಾರಿ ಕಿರಿಯ,  ಹಿರಿಯ ಪ್ರಾಥಮಿಕ ಪ್ರೌಢಶಾಲೆ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಕಳೆದ 5 ತಿಂಗಳಿಂದ ವೇತನವಿಲ್ಲದೇ ಪರದಾಡುವಂತಾಗಿದೆ.

ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಕೇವಲ ಹತ್ತು ಸಾವಿರ ಗೌರವಧನದಿಂದ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿದ್ದು ಇದರಿಂದ ಅತಿಥಿ ಶಿಕ್ಷಕರ ಕುಟುಂಬಗಳು ಹೇಳ ತೀರದ ಜೀವನ ನಡೆಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ಮಾಳಿ ಹೇಳಿದರು.

ಅವರು ಅಳಗವಾಡಿ ಗ್ರಾಮದ ಬೀರಪ್ಪನ ಮಡ್ಡಿಯ ಶಾಸಕರ ಕಚೇರಿಯಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ರಾಯಬಾಗ ತಹಸೀಲ್ದಾರ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಶೈಕ್ಷಣಿಕ ಅಭಿವೃದ್ಧಿ ಮತ್ತು ಹಿತದೃಷ್ಟಿಯಿಂದ ಮಕ್ಕಳಿಗೆ ಕಲಿಕೆಯ ತೊಂದರೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಯ ಅತಿಥಿ ಶಿಕ್ಷಕರಿಗೆ ಗೌರವಧನ ಮಂಜೂರಾಗಿ ಹದಿನೈದು ದಿನದ ಹಿಂದೆ ಬಿಡುಗಡೆ ಆಗಿದ್ದು, ಆದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ 5 ತಿಂಗಳಾದರೂ ಮಂಜೂರು ಮಾಡಲಾಗಿಲ್ಲ. ವೇತನವಿಲ್ಲದೇ ಸಮಾಜವನ್ನು ಕಟ್ಟುವಂತ ಶಿಕ್ಷಕರು ಸಮಾಜದಲ್ಲಿ ಕೈಚಾಚುವಂತ ಪರಿಸ್ಥಿತಿ ಎದುರಾಗಿದೆ ಎಂದು ಪ್ರದೀಪ ಮಾಳಿ ತಮ್ಮ ಅಳಲನ್ನು ತೋಡಿಕೊಂಡರು.

ಮನವಿ ಸ್ವೀಕರಿಸಿ ತಮ್ಮ ಮನವಿ ನೋವುಗಳನ್ನು ಹಾಗೂ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪ್ರತಿ ತಿಂಗಳು ವೇತನ ಬಿಡುಗಡೆ ಮಾಡುವಂತೆ ಕೋರುತ್ತೇನೆಂದು ಭರವಸೆ ನೀಡಿದರು.

ನಂತರ ಡಿಡಿಪಿಐ ಅವರೊಂದಿಗೆ ಮಾತನಾಡಿದಾಗ ಅವರು ವೇತನ ಬಿಡುಗಡೆ ಆಗಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಮಾತನಾಡಿ ತಿಳಿಸುವುದಾಗಿ ಹೇಳಿದರು ಅಂದರೆ  ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಅತಿಥಿ ಶಿಕ್ಷಕರ ಗೋಳಾಗಿದೆ.

ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜು ಪಾಸಾನೆ, ಉಪಾಧ್ಯಕ್ಷೆ ಸ್ವಪ್ನಾ ಕಾಂಬಳೆ, ಶ್ರೀದೇವಿ ಹುಡೇದಾರ, ಮಂಜುಳಾ, ಭುಜಪ್ಪ ಧರ್ಮಟ್ಟಿ, ಸುನೀಲ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!