ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಕುಸ್ತಿ ಪಂದ್ಯಾವಳಿಯಲ್ಲಿ ಸತತ ಹತ್ತನೇ ಬಾರಿಗೆ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ.
ಇತ್ತೀಚೆಗೆ ಹಾರೂಗೇರಿಯ ಎಸ್.ಪಿ.ಎಂ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಫ್ರೀ ಸ್ಟೈಲ್ ಕುಸ್ತಿ ಪಂದ್ಯವಾಳಿಯಲ್ಲಿ ಸತತವಾಗಿ 10ನೇ ಬಾರಿಗೆ ಚಾಂಪಿಯನ್ಶಿಪ್ ಪಟ್ಟ ಹಾಗೂ ಗ್ರೀಕೋ ರೋಮನ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ವಿಶ್ವ ವಿದ್ಯಾಲಯದ ಫ್ರೀಸ್ಟೈಲ್ 70 ಕೆ.ಜಿ. ವಿಭಾಗದಲ್ಲಿ ಮಹೇಶ ಲಂಗೋಟಿ, 92 ಕೆ.ಜಿ. ವಿಭಾಗದಲ್ಲಿ ಬಾಪುಸಾಹೇಬ ಶಿಂಧೆ, 61ಕೆ.ಜಿ. ವಿಭಾಗದಲ್ಲಿ ಮಹಾಂತೇಶ ಮೇತ್ರಿ ಪ್ರಥಮ ಸ್ಥಾನ ಪಡೆದಿದ್ದು, ಗ್ರೀಕೋ ರೋಮನ್ ಕುಸ್ತಿಯ 60 ಕೆಜಿ ವಿಭಾಗದಲ್ಲಿ ಸಿದ್ದಾಂತ ಕಾಮಕರ ಪ್ರಥಮ ಸ್ಥಾನ ಪಡೆದುಕೊಂಡು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ “ಬ್ಲೂ’ ಗಳಾಗಿ ಆಯ್ಕೆಯಾಗುವ ಮೂಲಕ ಸತತ ಹತ್ತನೇ ವರ್ಷ ಮಹಾವಿದ್ಯಾಲಯದ ಚಾಂಪಿಯನ್ ಪಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿ ಬರುವ 2025ರ ಜನವರಿಯಲ್ಲಿ ಪಂಜಾಬ ರಾಜ್ಯದಲ್ಲಿ ಜರುಗುವ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಮಹೇಶಕುಮಾರ ಲಂಗೋಟಿ ಕಳೆದ ಬಾರಿ ಜರುಗಿದ ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಹಾಗೂ ಖೇಲೋ ಇಂಡಿಯಾ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ವಿಶ್ವವಿದ್ಯಾಲಯಕ್ಕೆ ಹಾಗೂ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾನೆ.
ಈ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ನಿರ್ದೇಶಕ ಆಮೀತ ಘಾಟಗೆ, ಕಾರ್ಯದರ್ಶಿ ಎಸ್.ಆರ್. ಕುಸನಾಳೆ, ಪ್ರಾಚಾರ್ಯರಾದ ಎ.ಎಸ್.ಕಾಂಬಳೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಆರ್.ಎಂ. ಮಹೇಶವಾಡಗಿ, ಸಿಬ್ಬಂದಿ ಅಭಿನಂದಿಸಿ ಗೌರವಿಸಿದರು.