ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಪದವಿ ಮಹಾವಿದ್ಯಾಲಯ ಸತತ 9ನೇ ಬಾರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಮಕೆ ಸೀಮೆ ಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಗಿದೆ.
ಇತ್ತೀಚೆಗೆ ಸಿಂದಗಿಯ ಸಿ.ಎಂ.ಮನಗುಳಿ ಕಾಲೇಜು ಆಶ್ರಯದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಏಕವಲಯ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗಳಲ್ಲಿ ಬಿ.ಶಂಕರಾನಂದ ಮಹಾವಿದ್ಯಾಲಯದ 65ಕೆಜಿ ವಿಭಾಗದಲ್ಲಿ ಓಂ ಪಾಟೀಲ, 70ಕೆಜಿ ವಿಭಾಗದಲ್ಲಿ ಮಹೇಶಕುಮಾರ ಎಲ್., 79ಕೆಜಿ ವಿಭಾಗದಲ್ಲಿ ಸದಾಶಿವ ನಲವಡೆ, 86ಕೆಜಿ ವಿಭಾಗದಲ್ಲಿ ಮಲ್ಲೇಶ ಮೇತ್ರಿ, 92ಕೆಜಿ ವಿಭಾಗದಲ್ಲಿ ಬಾಪುಸಾಹೇಬ ಶಿಂದೆ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 60ಕೆಜಿ ವಿಭಾಗದಲ್ಲಿ ಸಿದ್ಧಾಂತ ಕಾಮುಕರ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ.
ಕ್ರೀಡಾಪಟುಗಳು ಈ ಸಾಧನೆ ಮಾಡಿ ವಿಶ್ವವಿದ್ಯಾಲಯ “ಬ್ಲೂ”ಗಳಾಗಿ ಆಯ್ಕೆಯಾಗುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಇದೆ ತಿಂಗಳ 28ರಿಂದ ಚಂದಿಗಡದಲ್ಲಿ ಜರುಗಲಿರುವ ಅಖೀಲ ಭಾರತ ಅಂತರ ವಿಶ್ವವಿದ್ಯಾಲಯಗಳ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಸಾಧನೆ ಮಾಡಿದ ಮಹಾವಿದ್ಯಾಲಯದ ಕ್ರೀಡಾಪಟುಗಳನ್ನು ಆಡಳಿತ ಮಂಡಳಿಯವರು, ಪ್ರಾಚಾರ್ಯರಾದ ಎ.ಎಸ.ಕಾಂಬಳೆ, ಆಡಳಿತ ಮಂಡಳಿ ಪ್ರತಿನಿಧಿ ಬಾಬಾಲಾಲ ಪಿನಿತೋಡ, ಕ್ರೀಡಾ ನಿರ್ದೇಶಕರಾದ ಆರ್.ಎಮ.ಮಹೇಶವಾಡಗಿ, ಪ್ರೊ. ಡಾ. ಎಮ.ಐ.ಜರ್ಮನ, ಉಪನ್ಯಾಸಕರು, ಸಿಬ್ಬಂದಿಯವರು ಅಭಿನಂದಿಸಿ ಸನ್ಮಾನಿಸಿದರು.