ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಶಾಂತಿ ಸಾಗರ ವೆಲ್ಫೇರ್ ಸೋಸಾಯಿಟಿಯ ಸನಶೈನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಲ್ಲಿ ಆಹಾರ ಜ್ಞಾನ, ವ್ಯವಹಾರ ಜ್ಞಾನ ಅರಿವು ಮೂಡಿಸುವ ನಿಟ್ಟಿನಲ್ಲಿ ಚಿನ್ನರ ಆಹಾರ ಮೇಳ ಜರುಗಿತು. ಆಯೋಜಿಸಲಾಗಿತ್ತು.
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದಿ ಮಾತಿನಂತೆ ಮಕ್ಕಳಿಗೆ ಯಾವ ಯಾವ ಆಹಾರ ಸೇವನೆಯಿಂದ ವಿವಿಧ ಬಗೆಯ ಪ್ರೋಟಿನ್, ಪೋಷಕಾಂಶಗಳು ದೊರೆಯುತ್ತವೆ ಎಂಬ ಭಾವನೆ ಇಟ್ಟುಕೊಂಡು ಸುಮಾರು 30ಕ್ಕೂ ಹೆಚ್ಚು ಸ್ಟಾಲ್ ಇಟ್ಟು ಮಕ್ಕಳು ಬಗೆಯ ಆಹಾರ ಅಂಗಡಿಗಳ ಮೇಳವನ್ನು ವಾರಕರಿ ಸಂಪ್ರದಾಯ ಸುಭಾಷ್ ಶಿವಾಳೆ ಮಹಾರಾಜರು ರಿಬ್ಬನ ಬಿಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಅವರಲ್ಲಿ ಉತ್ತಮ ಆಹಾರ ಸೇವಿಸುವ ಹಾಗೂ ವ್ಯವಹಾರ ಜ್ಞಾನ ಬೆಳೆಯುವುದು,
ಮಕ್ಕಳು ಇವತ್ತಿನ ಈ ರಾಸಾಯನಿಕ ಯುಕ್ತ ಜಂಜಾಟದಿಂದ ಹೊರಬಂದು ರಾಸಾಯನಿಕ ಮುಕ್ತ ಆಹಾರದತ್ತ ಒಲವು ತೋರಿಸಬೇಕು ಮಕ್ಕಳು ತಮ್ಮ ಉತ್ತಮ ಬೆಳವಣಿಗಾಗಿ ಫಾಸ್ಟ ಫುಡಗೆ ಮಾರುಹೋಗದೆ ಉತ್ತಮ ಆರೋಗ್ಯ ನೀಡುವಂತಹ ಆಹಾರ ಸೇವನೆ ಮಾಡಬೇಕು, ಆಹಾರ ಸೇವಿಸಲು ಹಠ ಮಾಡದೆ ನಿತ್ಯ ಸಮತೋಲನ ಆಹಾರ ಸೇವಿಸುವ ಮೂಲಕ ನಮ್ಮ ನಿರೋಗಿಯಾಗಿರಬೇಕು ಎಂದರು.
ನಂತರ ಎಡೆಬಿಡದೆ ಎಲ್ಲ ಆಹಾರ ಅಂಗಡಿಗಳಿಗೆ ಭೇಟಿ ನೀಡುವುದರೊಂದಿಗೆ ಆಹಾರ ರುಚಿ ಸವಿದು, ಮಕ್ಕಳಿಗೆ ಶುಭಾಶಯ ತಿಳಿಸಿದರು.
ಈ ಆಹಾರ ಮೇಳದಲ್ಲಿ ಕಚೋರಿ, ಪಾನಿಪುರಿ, ಆಯಿಸಕ್ರೀಮ, ಭೇಳ, ಥಾಲಿಪಟ್ಟಿ, ಹಲ್ವಾ, ಮಜ್ಜಿಗೆ, ಲಸ್ಸಿ, ಸುಮಾರು 30ಕ್ಕೂ ಹೆಚ್ಚಿನ ಬಗೆ ಬಗೆಯ ಆಹಾರಗಳನ್ನು ಇಟ್ಟು ವ್ಯವಹಾರ ಹಾಗೂ ಆಹಾರ ಜ್ಞಾನ ಪಡೆದರು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರಮೋದ ಬಾಲೋಜಿ, ಉಪಾಧ್ಯಕ್ಷ ಪುಷ್ಪದoತ ರತ್ತು, ಸುಭಾಷ ಶಿವಾಳೆ ಮಹಾರಾಜರು, ಶ್ರೀಶೈಲ್ ದರೂರೆ, ಸುದರ್ಶನ್ ಬಾಮಶೆಟ್ಟ, ಮುಖ್ಯೋಪಾಧ್ಯಾಯರಾದ ಪ್ರತಿಭಾ ಚಿಕ್ಕಬೇರಿ, ವೈಭವ ಹಂಜೆ, ಪ್ರವೀಣ್ ರತ್ತು, ಮೌನೇಶ್ ಸುತಾರ, ಸಿಬ್ಬಂದಿ, ಪಾಲಕರು ಇತರರು ಉಪಸ್ಥಿತರಿದ್ದರು.