ಕುಡಚಿ ಕಲ್ಚರಲ್ ಪೆಸ್ಟಿವಲ್ ಬಹುಮಾನ ವಿತರಿಸಿದ : ಮಹೇಂದ್ರ ತಮ್ಮಣ್ಣವರ

Share the Post Now

ಬೆಳಗಾವಿ

ರಾಯಬಾಗ :ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದ ಕುಡಚಿ ಕಲ್ಚರಲ ಫೆಸ್ಟಿವಲ್ ವಿಜೇತರಿಗೆ ಬಹುಮಾನ ವಿತರಣೆಯನ್ನು ಕಾಂಗ್ರೆಸ್ ಮುಖಂಡ ಮಹೇಂದ್ರ ತಮ್ಮಣ್ಣವರ ಅವರು ವಿತರಣೆ ಮಾಡಿದರು

ಪಟ್ಟಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಹೇಂದ್ರ ತಮ್ಮಣ್ಣವರ ಪ್ರಾಯೋಜಕತ್ವದಲ್ಲಿ ಮೂರು ದಿನಗಳ ಕಾಲ ಕುಡಚಿ ಕಲ್ಚರಲ್ ಫೆಸ್ಟಿವಲ್ ಕಾರ್ಯಕ್ರಮ ಜರುಗಿದವು.

ಮಹೇಂದ್ರ ತಮ್ಮಣ್ಣವರ ಪ್ರಾಯೋಜಕತ್ವದಲ್ಲಿ ಹಜರತ ದಾದಿ ಮಾ ಚಂದನ ವೆಲ್ಫೇರ್ ಗ್ರೂಪ್ ಸಹಯೋಗದೊಂದಿಗೆ ಮೂರುದಿನ ವ್ಹಾಲಿಬಾಲ, ಛೇಫ ವಾರ, ಸಂಗೀತ,ನಾಟಕ, ಚಿತ್ರಕಲೆ, ವಿಜ್ಞಾನ ಪ್ರದರ್ಶನ, ನೃತ್ಯ ಇತರೆ ಕಾರ್ಯಕ್ರಮಗಳು ಜರುಗಿದವು ಕಾರ್ಯಕ್ರಮದಲ್ಲಿ ಕುಡಚಿ ಪಟ್ಟಣ ಹಾಗೂ ಗ್ರಾಮೀಣ ಭಾಗದ 15 ಸರ್ಕಾರಿ, ಖಾಸಗಿ ಶಾಲೆಗಳಿಂದ ಸುಮಾರು 1467ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ಕೂನೆಯ ದಿನ ಸಂಜೆ ವಿಜೇತರಿಗೆ ಬಹುಮಾನ ವಿತರಣೆ ವೇದಿಕೆ ಕಾರ್ಯಕ್ರಮ ಜರುಗಿತು.

ವೇದಿಕೆಯ ಕಾರ್ಯಕ್ರಮಕ್ಕೆ ಕಾರ್ಯಕ್ರಮದ ಮುಖ್ಯ ರೂವಾರಿ ಮಹೇಂದ್ರ ತಮ್ಮಣ್ಣವರ ಅವರನ್ನು ದಾದಿ ಗ್ರುಪ ಹಾಗೂ ಕುಡಚಿ ಜನತೆ ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು.

ಮೂರು ದಿನಗಳಿಂದ ಜರುಗಿದ ವಿವಿಧ 17 ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವಿಜೇತರಾಗಿ ಆಯ್ಕೆಯಾದ ಪ್ರಥಮ, ದ್ವಿತೀಯ ತೃತೀಯ ವಿಜೇತರಿಗೆ ಕಾಂಗ್ರೆಸ್ ಯುವ ಮುಖಂಡ ಮಹೇಂದ್ರ ತಮ್ಮಣ್ಣವರ ಬಹುಮಾನ ವಿತರಣೆ ಮಾಡಿದರು. ನಂತರ ಶಾಲಾ ಮಕ್ಕಳಿಗೆ ಸುಮಾರು 400 ಶಾಲಾ ಬ್ಯಾಗ್ ವಿತರಣೆ ಮಾಡಿದರು.

ಸತತ ಮೂರು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನತೆ ಭಾಗಿಯಾಗುವ ಮೂಲಕ ಮನೋರಂಜನೆ ಲಾಭ ಪಡೆದುಕೊಂಡರು.

ಈ ಸಂದರ್ಭದಲ್ಲಿ ಹಜರತ ದಾದಿ ಮಾ ಚಂದನ ವೆಲ್ಫೇರ್ ಗ್ರೂಪ್ ಯುವಕರು, ಸಲೀಮ ಚಮನಶೇಖ, ದಸ್ತಗೀರ ಕಾಗವಾಡೆ, ಬಾಬಾಜಾನ ಜಿನ್ನಾಬಡೆ, ಈಶ್ವರ ಗಿಣಿಮೂಗೆ, ಮಹಾಂತೇಶ ತೆಗ್ಗಿ, ಮಾರುಫ ಇತರರು ಭಾಗಿಯಾಗಿದ್ದರು.

ವರದಿ: ಸುನೀಲ್ ಕಬ್ಬೂರ

Leave a Comment

Your email address will not be published. Required fields are marked *

error: Content is protected !!