ಬೆಳಗಾವಿ.ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಶ್ರೀ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಎರಡು ಟ್ರ್ಯಾಕ್ಟರ್ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಿದರು.
ಬಿಡಿಸಿಸಿ ಬ್ಯಾಂಕ ವತಿಯಿಂದ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ರೈತ ಫಲಾನುಭವಿಗಳಿಗೆ ಬಿಡಿಸಿಸಿ ನಿರ್ದೇಶಕ ಅಪ್ಪಾಸಾಹೇಬ ಕುಲಗೂಡೆ ತಲಾ ಹತ್ತು ಲಕ್ಷ ಮೊತ್ತದ ಎರಡು ಟ್ರ್ಯಾಕ್ಟರ್ ವಿತರಿಸಿದರು.
ನಂತರ ಪಟ್ಟಣದ ಸರಸ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘಕ್ಕೆ ಏಳು ಲಕ್ಷ, ಜೈ ಭಾರತ ಹಾಗೂ ಶ್ರೀ ರೇಣುಕಾದೇವಿ ಸಂಘಗಳಿಗೆ ತಲಾ ಐದು ಲಕ್ಷ ಸಾಲ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಟಿಸಿಓ ಎಸ್.ಬಿ.ಪಾಟೀಲ, ಕುಡಚಿ ಬಿಡಿಸಿಸಿ ವ್ಯವಸ್ಥಾಪಕ ಶ್ರೀಧರ ಪಾಟೀಲ, ಚಿಂಚಲಿ ವ್ಯವಸ್ಥಾಪಕ ಮಹಾಂತೇಶ ನಂದಿಗೌಡರ, ಅವಿನಾಶ ಚೌಗಲಾ, ವ್ಯವಸ್ಥಾಪಕ ಸಂಜು ಚೌಗಲಾ, ನಿರ್ದೇಶಕ ಈರಗೌಡ ಪಾಟೀಲ, ಚಂದ್ರಶೇಖರ ಗಣಿ, ಭಾಸ್ಕರ ಬಡಿಗೇರ, ರಾಜು ಶಿರಗಾಂವೆ, ಪಪಂ ಸದಸ್ಯ ಸಂಭಾಜಿ ಶಿಂಧೆ, ಸಾಗರ ಘೇವಾರಿ, ಸಚಿನ್ ಢಾಕೋಜಿ, ಗೋಮಟೇಶ ಪಾಟೀಲ ಉಪಸ್ಥಿತರಿದ್ದರು.