ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಕುಡಚಿಯಲ್ಲಿ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ.ರಂಗನಾಥ ಅವರ ಜನ್ಮದಿನದಂದು ಗ್ರಂಥಪಾಲಕರ ದಿನ ಆಚರಣೆಯನ್ನು ಪ್ರಾಚಾರ್ಯ ಎ.ಎಸ.ಕಾಂಬಳೆ ರಂಗನಾಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಇವತ್ತಿನ ಆಧುನಿಕ ಯುಗದಲ್ಲಿ ಯುವ ಜನತೆ ಮೊಬೈಲಿನಲ್ಲಿ ಕಾಲಹರಣ ಮಾಡುವ ಬದಲು ಡಿಜಿಟಲ್ ಗ್ರಂಥಾಲಯ ಅಂತರ್ಜಾಲ ಬಳಸಿ ಮಾಹಿತಿ ಕಲೆಹಾಕಿ ಓದಿನ ಕಡೆಗೆ ಗಮನ ಹರಿಸಿದ್ದಲ್ಲಿ ಸಾಧನೆಗೆ ಸರಳ ಮಾರ್ಗವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಎಸ.ಬಿ.ಕಲ್ಲೋಳ್ಕರ, ಡಾ.ಎಂ.ಐ.ಜರ್ಮನ, ಡಾ. ಎಸ್.ಎ.ಬೆಳಗಲಿ, ಪ್ರೊ. ಶೋಭಾ ಕೊಕಟನೂರ, ಪ್ರೊ.ಎಂ.ಎಲ.ಖಜ್ಜಿಡೋಣಿ, ವಿ.ಎಸ.ವಾವರೆ, ಮಸೂಡಗಿ, ಶಿಂಗೆ, ಗ್ರಂಥಪಾಲಕ ನೇಮಿನಾಥ ಖವಟಕೊಪ್ಪ ಭಾಗಿಯಾಗಿದ್ದರು