ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕುಡಚಿ ಮಹಾನವಮಿ ಉತ್ಸವ ಸಮಿತಿಯಿಂದ 9ನೇ ದಿನದ ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ ನೀಡಿದರು.
ಪಟ್ಟಣದ ಶ್ರೀ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ ಹಾಗೂ ಶೋಭಾ ಮಠಪತಿಯಿಂದ ದಂಪತಿಯಿಂದ ಸುಮಾರು ಐದು ನೂರಕ್ಕೂ ಹೆಚ್ಚು ಮುತ್ತೆದೇಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ನಂತರ ಚೈತನ್ಯ ದೇವಿಯರ ದಿವ್ಯ ದರ್ಶನವನ್ನು ಕುಡಚಿ ಕೇಂದ್ರದ ಬಿ.ಕೆ. ವಿದ್ಯಾ ಅಕ್ಕನವರು ರಿಬ್ಬನ್ ಎಳೆಯುವ ಮೂಲಕ ಚಾಲನೆ ನೀಡಿದರು.
ನಂತರ ವೇದಿಕೆ ಕಾರ್ಯಕ್ರಮವನ್ನು ಶೇಗುಣಸಿಯ ಡಾ. ಮಹಾಂತ ದೇವರು ಗಣ್ಯರಿಂದ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಉದ್ಘಾಟನೆ ಪರ ಮಾತನಾಡಿ ಇವತ್ತಿನ ಜಗತ್ತಿನಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ ದಿನಬೆಳಗಾದರೆ ತಾಯಂದಿರ ಮೇಲೆ ನಿತ್ಯ ಕಿರುಕುಳ ಅತ್ಯಾಚಾರಗಳು ಸುದ್ದಿ ಕೇಳುವಂತಾ ಪರಿಸ್ಥಿತಿ ಬಂದಿದೆ. ತಾಯಿಯನ್ನು ನೋಯಿಸಿ ನೀವು ಚಾಮುಂಡಿಯ ದರ್ಶನ ಪಡೆದರು ದೇವರು ಒಲೆಯುವುದಿಲ್ಲ ತಾಯಿಯನ್ನು ಗೌರವಿಸುವ ಜಾಗ ಸುಕ್ಷೇತ್ರವಾಗುತ್ತದೆ ನೀವು ಮನೆಯಲ್ಲಿ ಇರುವ ತಾಯಿಯೆ ದೇವರೆಂದು ತಿಳಿದರೆ ಚಾಮುಂಡಿಯ ಆಶೀರ್ವಾದ ನಿಮಗೆ ಸಿಗುತ್ತದೆ ಎಂದರು.
ಕು.ದೀಪಾ ಹೇಳವರ ಇವರಿಂದ ದೇವಿಯ ಪಾರಾಯಣ ಜರುಗಿತು.
ನಂತರ ಮುಖ್ಯ ಅತಿಥಿಗಳಾದ ಖ್ಯಾತ ವೈದ್ಯ ಡಾ. ಎಚ.ಎನ.ಸಾಬಡೆ ದಸರಾ ಕುರಿತು, ಬಿ.ಕೆ.ಅಶ್ವಿನಿ ದಸರಾ ಹಾಗೂ ಸುಖಮಯ ಜೀವನವನ್ನು ಸಾಗಿಸುವ ಪರಿ ತಿಳಿಸಿದರು.
ಸತ್ಕಾರ ಮೂರ್ತಿ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿಯವರನ್ನು ಸತ್ಕರಿಸಿದರು
ನಂತರ ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕೃತಿಕ ನೃತ್ಯ ಚೈತನ್ಯ ದೇವಿಯರ ದರ್ಶನ ಜರುಗಿತು.
ಕೊನೆಯ ದಿನ ಪಟ್ಟಣದ ಶ್ರೀ ಕಾಳಿಕಾದೇವಿ ಮೌನೇಶ್ವರ ಮಂದಿರದಿಂದ ಗಣೇಶ ಮಂದಿರದವರೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳ ಮೂಲಕ ದುರ್ಗಾದೇವಿ ಪಲ್ಲಕ್ಕಿ ಹಾಗೂ ಬನ್ನಿ ಮೆರವಣಿಗೆ ಜರುಗಿತು.
ನಂತರ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ವಿನಿಮಯ ಮಾಡಕೊಂಡು ಬಂಗಾರ ತೊಗೊಂಡು ಬಂಗಾರದ ಹಾಗೆ ಇರುವಂತೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಗಜಾನನ ಬಾಲೆ, ಶ್ರೀಶೈಲ ದರೂರೆ, ಡಾ. ಲಕ್ಷ್ಮಣ ಚೌರಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸುನಂದಾ ಅಕ್ಕೆನ್ನವರ, ಉಪಾಧ್ಯಕ್ಷ ಮಧುಕರ ಸಣ್ಣಕ್ಕಿ, ಜಯಕುಮಾರ್ ಮನಗುತ್ತಿ, ಸದಾನಂದ ಘಾಟೆ, ಬಾಬಾಸಾಬ ಕದ್ದು, ಸದಸ್ಯರಾದ ರತ್ನಂಜಯ ಕದ್ದು, ಕಾರ್ಯಕಾರಿ, ಗಣೇಶ ಉತ್ಸವ ಸಲಹಾ ಸಮಿತಿ ಅಧ್ಯಕ್ಷ ಸಿದ್ಧಾನಿ ಸಣ್ಣಕ್ಕಿ, ಉಪಾಧ್ಯಕ್ಷ ಶ್ರೀಮಂತ ನಾಯಿಕ, ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಶೇಖರ್ ದಳವಾಯಿ, ಉಪಾಧ್ಯಕ್ಷ ಶೀತಲ ಲೋಹಾರ ಮಹಾನವಮಿ ದಸರಾ ಉತ್ಸವ ಸರ್ವ ಸದಸ್ಯರು ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಲ್ಲಪ್ಪ ಯಲ್ಲಟ್ಟಿ ನಿರೂಪಿಸಿದರು, ಬಿ.ಎಚ.ಹುಲ್ಲೆನ್ನವರ ಸ್ವಾಗತಿಸಿದರು, ಶೋಭಾ ಸನದಿ ವಂದಿಸಿದರು.
ವರದಿ: ಸಂಜೀವ ಬ್ಯಾಕುಡೆ, ರಾಯಬಾಗ