ಬೆಳಗಾವಿ.
ವರದಿ: ಸಂಜೀವ ಬ್ಯಾಕುಡೆ, ರಾಯಬಾಗ
ಕುಡಚಿ :ಕನಕದಾಸರು ಸುಮಾರು 537ವರ್ಷ ಕಳೆದರು ಅಜರಾಮರ ವಾಗಿದ್ದಾರೆಂದರೆ ಅವರ ಮೌಲ್ಯಯುತ ಜೀವನದ ಅವರನ್ನು ನೆನಪಿನಲ್ಲಿ ಇಡುವಂತೆ ಮಾಡಿವೆ ಆದ್ದರಿಂದ ಪ್ರತಿಯೊಬ್ಬ ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಒಂದಿಲ್ಲೊಂದು ಒಳ್ಳೆಯ ಚಿಂತನೆ, ಭಾವನೆ, ವಿಚಾರವನ್ನು ಸಮಾಜವನ್ನು ಎತ್ತಿ ಹಿಡಿಯುವಂತಹ ಕಾರ್ಯಗಳನ್ನು ಮಾಡಿದ್ದರಿಂದಲೇ ಅವರು ಪೂಜನೀಯರಾಗಿದ್ದಾರೆ ಎಂದು ಕುಡಚಿ ಪಿಎಸ್ಐ ಪ್ರೀತಮ ನಾಯಕ ತಿಳಿಸಿದರು.
ಅವರು ಕುಡಚಿ ಪಟ್ಟಣದ ಶ್ರೀ ಕನಕದಾಸ ಯುವಕ ಸಂಘ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಾಳಿಂಗರಾಯ ದೇವಸ್ಥಾನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಇಂದಿನ ಯುವಕರು ಇಂತಹ ಮಹಾಪುರುಷರ ಸಂತರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಪಾವನಗೊಳಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಧನ್ಯಕುಮಾರ ಮನಗುತ್ತಿ, ಸಿದ್ಧಾಣಿ ಸಣ್ಣಕ್ಕಿ, ಶ್ರೀಮಂತ ನಾಯಕ, ಶೇಖರ ದಳವಾಯಿ, ಡಾ. ಸಚಿನ ಮನಗುತ್ತಿ, ಸಂದೀಪ ಬ್ಯಾಕುಡೆ, ಅಶೋಕ ಕೋಳಿಗುಡ್ಡ, ಸಚಿನ್ ಕೋಳಿಗುಡ್ಡ, ಶಾಮು ಮನಗುತ್ತಿ, ನ್ಯಾಯವಾದಿಗಳಾದ ಕೆ.ಎಲ.ಕೆರೂರೆ, ಬಾಬು ಕೋಳಿಗುಡ್ಡ, ಧರೆಗೌಡ ಮನಗುತ್ತಿ, ಮಾಜಿ ಸೈನಿಕ ಕರೆಪ್ಪ ಬ್ಯಾಕುಡೆ, ರವಿ ಕಾಳೆ, ಸಚಿನ ತೇಲಿ, ಶೀತಲ ಲೋಹಾರ, ಪಿಂಟು ಕಮರೆ, ಸಿದ್ದು ಕಮರೆ, ಸಮಾಜ ಪ್ರಮುಖರು, ಗಣೇಶ ಉತ್ಸವ ಸಮಿತಿ ಸದಸ್ಯರು, ಇತರರು ಉಪಸ್ಥಿತರಿದ್ದರು