ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಳಿಂಗರಾಯ ದೇವಸ್ಥಾನದ ಆವರಣದಲ್ಲಿ ಭಕ್ತ ಕನಕದಾಸ ಯುವಕ ಸಂಘದ ಅಡಿಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಸಾನಿಧ್ಯ ವಹಿಸಿ ಮಾತನಾಡಿದರು.
ಜಕನೂರ ಮಾದನ ಮದಗೊಂಡೇಶ್ವರ ಸಿದ್ಧಾಶ್ರಮ ಪೂಜ್ಯರಾದ ಮಾದುಲಿಂಗ ಮಹಾರಾಜರು ಮಾತನಾಡಿ ಜಗತ್ತಿನಲ್ಲಿ ಸಾಧು,ಸಂತರು, ಸನ್ಯಾಸಿ ಪುಣ್ಯಾತ್ಮರನ್ನು ಹೊಂದಿದ ನಾಡು ಯಾವುದಾದರೂ ಇದ್ದರೆ ಅದು ನಮ್ಮ ಭಾರತ
ಎಲ್ಲಿಯವರೆಗೆ ನಮ್ಮಲ್ಲಿ ಸಂಸ್ಕೃತಿ ಭಾವ ಬರುವುದಿಲ್ಲವೋ ಅಲ್ಲಿಯವರೆಗೂ ನಾವು ಜಾಗೃತರಾಗುವುದಿಲ್ಲ ಅಲ್ಲಿಯವರೆಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಆಗುವುದಿಲ್ಲ.
ಮಹಾತ್ಮರ ಒಂದು ಅಧ್ಯಯನದಿಂದ ಜಗತ್ತಿನಲ್ಲಿ ಶ್ರೇಷ್ಠ ಧರ್ಮ ಯಾವುದಾದರೂ ಇದ್ದರೆ ಅದು ಹಾಲುಮತ ಸಮಾಜವಾಗಿದೆ ಸಂತರು,ಮಹಾತ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದರೆ ಮನೆಗೊಬ್ಬ ಕನಕದಾಸರಂತೆ ಆದರ್ಶ ಜೀವನ ಸಾಗಿಸಬಹುದು ಎಂದರು.
ಕನಕದಾಸರ ಭಾವಚಿತ್ರಕ್ಕೆ ಪಿಡಿಓ ಶ್ರೀದೇವಿ ಗುಂಡಾಪೂರ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ದತ್ತಾ ಸಣ್ಣಕ್ಕಿ ಕನಕದಾಸರ ಭಾವಚಿತ್ರದ ಪೂಜೆ ನೆರವೇರಿಸಿದರು. ವೇದಿಕೆ ಕಾರ್ಯಕ್ರಮವನ್ನು ಪೂಜ್ಯರು ಹಾಗೂ ಗಣ್ಯರಿಂದ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು.
ನಂತರ ಶಿಕ್ಷಕಿ ಶ್ರೀದೇವಿ ಬ್ಯಾಕುಡೆ ಅವರಿಂದ ಭಕ್ತಿಗೀತೆ ಪ್ರಸ್ತುತ ಪಡಿಸಿ, ಸಾಹಿತಿ ಬಿ.ಎಲ.ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳಿಂದ ಭಕ್ತಿಗೀತೆ ನೃತ್ಯ ಪ್ರದರ್ಶನ ನಡೆಯಿತು.
ಇದೇ ಸಮಯದಲ್ಲಿ ಮಂದಿರದ ಎದುರಿಗೆ ಪೂಜ್ಯರಿಂದ ನೂತನವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ವಿಠ್ಠಲ ಹಳ್ಳೂರ, ಪುರಸಭೆ ಮಾಜಿ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಪಿಡಿಓ ಶ್ರೀದೇವಿ ಗುಂಡಾಪುರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಧುಕರ ಸಣ್ಣಕ್ಕಿ, ಮಾಳಿಂಗರಾಯ ಕಮಿಟಿ ಅಧ್ಯಕ್ಷ ರಮೇಶ ಕೋಳಿಗುಡ್ಡ, ಮುಶ್ಫಿಕ ಜಿನ್ನಾಬಡೆ,
ಡಾ. ಸಚೀನ ಮನಗುತ್ತಿ, ಮಾರುತಿ ಭಾನುಶೆ, ಸಚೀನ ಕೋಳಿಗುಡ್ಡ, ಸಂದೀಪ ಹುಗಾರ, ಕರೆಪ್ಪಾ ಬ್ಯಾಕುಡೆ, ಲಕ್ಷ್ಮಣ ಅರಟಾಳ, ಮಹಾವೀರ ಐನಾಪುರೆ, ಪಿಂಟು ಕಮರೆ, ಬೀರಪ್ಪ ಬ್ಯಾಕುಡೆ, ಸಹದೇವ ಗಾವಡೆ ಸಮಾಜದ ಪ್ರಮುಖರು, ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.