ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ನಿಲಜಿ ಹಾಗೂ ಹಾರೂಗೇರಿ ಕ್ರಾಸನಲ್ಲಿ ಎರಡು ಕೋಟಿ ಮೊತ್ತದ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು.
ಕರ್ನಾಟಕ ಸರಕಾರ ಸಣ್ಣ ನಿರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಬೆಳಗಾವಿ 2024-25 ನೇ ಸಾಲಿನ ಲೆಕ್ಕ ಶಿರ್ಷಿಕೆ 4702 ಪ್ರಧಾನ ಕಾಮಗಾರಿಗಳ ಯೋಜನೆ ಅಡಿಯಲ್ಲಿ ನಿಲಜಿ ಗ್ರಾಮದ ಹಸರೆ ತೋಟದ ಹತ್ತಿರ ಹಳ್ಳಕ್ಕೆ ಒಂದು ಕೋಟಿ ಮೊತ್ತದ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿ ಹಾಗೂ ಹಾರೂಗೇರಿ ಕ್ರಾಸ ಹಿರೇಹಳ್ಳಕ್ಕೆ ಒಂದು ಕೋಟಿ ಮೊತ್ತದ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕುಡಚಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲಗುಣಿ, ಅಜೀತ ಹೆಸರೆ, ಸಂತೋಷ ಮೋರೆ, ಸುಧಾಕರ ನಿಂಬಾಳಕರ, ಕರೆಪ್ಪಾ ಅಕ್ಕಿಬರಡಿ, ಗಣಪತಿ ಪೂಜಾರಿ, ವರ್ಧಮಾನ ಶಿರಹಟ್ಟಿ, ಬಾಳು ಹಾಡಕಾರ, ಇಲಾಖೆ ಎಇಇ ಪ್ರವೀಣ ಪಾಟೀಲ, ಕಿರಿಯ ಅಭಿಯಂತರ ಸಾಗರ ಪವಾರ, ಗುತ್ತಿಗೆದಾರರಾದ ಎ.ವಿ.ಉಗಾರೆ, ಬೆನಚಿನಮರಡಿ, ಊರಿನ ಪ್ರಮುಖರು ಹಿರಿಯರು ರೈತರು ಸಾರ್ವಜನಿಕರು ಉಪಸ್ಥಿತರಿದ್ದರು