ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ವಿವಿಧ ಯೋಜನಾನುದಾನದ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು.
ಕುಡಚಿ ಪಟ್ಟಣದ ವಾರ್ಡ್ ನಂ. 20ರ ಶಾಮ ನಗರ ಮಸ್ಜಿದಗೆ ವಕ್ಫದಿಂದ ಐದು ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣ, ಸರ್ಕಾರಿ ಕಿರಿಯ ಪ್ರಾಥಮಿಕ ಮರಾಠಿ ಶಾಲೆಯ ಸುಮಾರು 36 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿ ನಿರ್ಮಾಣ, ಪಟ್ಟಣದ 10,16, 19, ವಾರ್ಡಗಳಲ್ಲಿ ಪುರಸಭೆ 15ನೇ ಹಣಕಾಸು ಯೋಜನೆ ಅಡಿಯಲ್ಲಿ ರಸ್ತೆ, ಚರಂಡಿ, ಫೀವರ ಬ್ಲಾಕ್ ಹಾಗೂ ಇತರೆ ವಿವಿಧ ಕಾಮಗಾರಿಗಳಿಗೆ ಹಾಗೂ ಹ.ಮಾಸಾಹೇಬಾ ದರ್ಗಾ ಹಾಗೂ ಡಾ. ಬಿ.ಆರ. ಅಂಬೇಡ್ಕರ್ ವಸತಿ ಶಾಲೆ ಆವರಣದಲ್ಲಿ ಫೀವರ ಬ್ಲಾಕ್ ಅಳವಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪುರಸಭೆಗೆ ಈ ಹಿಂದೆ ಖರೀದಿಸಲಾದ ವ್ಯಾಕ್ಯೂಮ್ ಕ್ಲೀನರ ವಾಹನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಮಿದೋದಿನ ರೋಹಿಲೆ, ಮುಶ್ಫಿಕ ಜಿನಾಬಡೆ, ಪುರಸಭೆ ಸದಸ್ಯರಾದ ಇಮಾಮುದ್ದಿನ ಸಜ್ಜನ, ಸಾದೀಕ ರೋಹಿಲೆ, ಸಂಜೀವ ರಡರಟ್ಟಿ, ಸಾಕೀಬ ಪಾಳೇಗಾರ, ಮಹಿಬೂಬ ಜಾತಗಾರ, ಮೊಸೀನ ಮಾರುಫ, ಯಾಶೀನ ಚಮನಶೇಖ, ಅಬ್ದುಲಖಾದರ್ ರೋಹಿಲೆ, ನಿಸಾರ ಬಾಗೆ, ದೇವಮೋರೆ, ಈಶ್ವರ ಗಿಣಿಮೂಗೆ, ಸುರೇಶ್ ಹೊಸಮನಿ, ಗುತ್ತಿಗೆದಾರರಾದ ರಾಜು ದಳವಾಯಿ, ಮಹಾದೇವ ಚೌಗಲಾ, ಕೋಳಿ, ಇರ್ಫಾನ್ ಜಕಾತಿ, ಪುರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ, ಅಭಿಯಂತರರಾದ ಎಸ್.ಆರ.ಚೌಗಲಾ, ಲೋಕೋಪಯೋಗಿ ಅಭಿಯಂತರ ಶ್ರೀಧರ ಮೇಗಳಮನಿ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ವಿಠ್ಠಲ ಚಂದರಗಿ ಇತರರು ಉಪಸ್ಥಿತರಿದ್ದರು.
ವರದಿ: ಸಂಜೀವ ಬ್ಯಾಕುಡೆ, ರಾಯಬಾಗ