ರಾಯಬಾಗ.ಮುಗಳಖೋಡ :ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕವು ಆರ್ಥಿಕವಾಗಿ ಪ್ರಗತಿ ಹೊಂದಿ ಈ ಬಾಗದ ರೈತರಿಗೆ ಕೂಲಿಕಾರರಿಗೆ ಮದ್ಯಮ ವರ್ಗದವರಿಗೆ ಹಾಗೂ ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಅವರು ಮುಗಳಖೋಡ ಪಟ್ಟಣದ ನೀರಲಕೋಡಿ ತೋಟದಲ್ಲಿ ನೂತನ ಶ್ರೀ ಬಸವೇಶ್ವರ ಸಹಕಾರಿ ಸಂಘ ನೀ ಬ್ಯಾಂಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಬಸವೇಶ್ವರ ಸಹಕಾರಿ ಸಂಘವು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿ ಜನರೊಡನೆ ಬೆರೆತು ಸಹಕರಿಸಬೇಕೆಂದು ಹೇಳಿದರು.
ಈ ಸಮಯದಲ್ಲಿ ಶಶಿಕಾಂತ ಪಡಸಲಗಿ ಗುರುಗಳು. ಮಾಜಿ ಜಿಲ್ಲಾ ಪ ಸದಸ್ಯ ಡಾ ಸಿ ಬೀ ಕೂಲಿಗೋಡ. ಚೂನಪ್ಪ ಪೂಜೇರಿ. ಶ್ರೀ ಬಸವೇಶ್ವರ ಸಹಕಾರಿ ಸಂಘ ಅಧ್ಯಕ್ಷ ಶ್ರೀಶೈಲ ಅಂಗಡಿ. ಉಪಾಧ್ಯಕ್ಷ ಹಣಮಂತ ಲಕ್ಷ್ಮೇಶ್ವರ. ಲಕ್ಷ್ಮಣ ಕತ್ತಿ.ಭೀಮಪ್ಪ ಅಂಗಡಿ.ರಮೇಶ ಯಡವನ್ನವರ ಹಣಮಂತ ಅಂಗಡಿ. ಮುರಿಗೆಪ್ಪ ಮಾಲಗಾರ. ಶ್ರೀಶೈಲ ಅಂಗಡಿ. ಗಂಗಪ್ಪ ಗೋಕಾಕ.ಸಿದ್ದಪ್ಪ ಅಂಗಡಿ.
ಯಲ್ಲಪ್ಪ ಅಂಗಡಿ. ರಮೇಶ ನಾಶಿ. ಉಮೇಶ ಅಂಗಡಿ. ಸಂಜು ಕೋರೆ. ಅಗ್ರಾಣಿ ಬಂಗಿ. ಮಹಾದೇವ ಹೊಸಟ್ಟಿ. ನಾಗರಾಜ ಹೊಸಪೇಟೆ. ರವೀಂದ್ರ ನುಚ್ಚುಂಡಿ. ಸೇರಿದಂತೆ ಆಡಳಿತ ಮಂಡಳಿ ಹಾಗೂ ಸುತ್ತಮುತ್ತಲಿನ ಗುರು ಹಿರಿಯರು ಹಾಗೂ ರೈತ ಸಂಘದ ಕಾರ್ಯಕರ್ತರಿದ್ದರು.





