ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಸಾಹೇಬಾ ದರ್ಗಾಕ್ಕೆ ತೆರಳಿ ಶಾಸಕ ಮಹೇಂದ್ರ ತಮ್ಮಣ್ಣವರ ದೇವಿಗೆ ಗಲೀಪ ಸಲ್ಲಿಸಿದರು.
ಸೋಮವಾರ ಸಂಜೆ 7ಗಂಟೆಗೆ ಕುಡಚಿ ಪಟ್ಟಣ ಮಾಸಾಹೇಬಾ ಉರುಸ ನಿಮಿತ್ಯ ದರ್ಗಾಕ್ಕೆ ತೆರಳಿ ಅಪಾರ ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಗ್ರಾಮ ದೇವತೆ ಹಜರತ ಮಾಸಾಹೇಬಾ ದೇವಿಯ ದರ್ಶನ ಪಡೆದು ಗಲೀಪ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಮೀದಿನ ರೋಹಿಲೆ, ಈಶ್ವರ ಗಿಣಿಮೂಗೆ, ಆತೀಫ ಪಟಾಯತ, ಏಜಾಜ್ ಬಿಚ್ಚು, ಅಬ್ದುಲಖಾದರ ರೋಹಿಲೆ, ಜವುರ ರೋಹಿಲೆ, ಮಕ್ಸುದ ಖುದಾವಂತ, ರಾಜು ನಿಡಗುಂದಿ, ರಾಜು ಗಸ್ತಿ, ಸಾದಿಕ್ ಸಜ್ಜನ, ಅಹ್ಮದ್ ಸಂದರವಾಲೆ, ಸರ್ಫರಾಜ್ ಕರೀಮಖಾನ, ಜಾವೀದ್ ರುಕುಂದಿ, ತೋಫೀಕ ಓಮನೆ, ಇತರರು ಉಪಸ್ಥಿತರಿದ್ದರು