ಬೆಳಗಾವಿ.
ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ಕೃಷ್ಣ ನದಿಗೆ ಬಾಗಿನ ಅರ್ಪಣೆ ಮಾಡಿದರು.
ಮಂಗಳವಾರ ಮಧ್ಯಾಹ್ನ 12ಗಂಟೆಗೆ ಮತಕ್ಷೇತ್ರದ ಶಿರಗೂರ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರೊಂದಿಗೆ ತಾಯಂದಿರೊಂದಿಗೆ ಬೋಟ ಮೂಲಕ ಕೃಷ್ಣ ನದಿ ಮದ್ಯದಲ್ಲಿ ತೆರಳಿ ಈ ವರ್ಷ ರೈತರ ಸಮೃದ್ಧಿ ಆರೋಗ್ಯ ಐಶ್ವರ್ಯ ತರಲೆಂದು ಹಾರೈಸುವ ಮೂಲಕ ನದಿಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಸದಾಶಿವ ಭಿರಡಿ, ಶಿವಾನಂದ ಭಾವಿ, ಮಹಾದೇವ ಚೌಗಲಾ, ಡಾ.ಸಿದ್ಧಾರೂಢ ಕೌಲಗುಡ್ಡ, ಮೋರ್ಡಿ ಬಂಧುಗಳು, ಭರತೇಶ ಶಿರಹಟ್ಟಿ, ಮಹಿಳೆಯರು, ಮಕ್ಕಳು ಇತರರು ಭಾಗವಹಿಸಿದ್ದರು
ವರದಿ :ಸಂಜೀವ್ ಬ್ಯಾಕುಡೆ