ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಕುಡಿಯುವ ನೀರು ಕಾಮಗಾರಿಗೆ ಪೂಜೆ ಹಾಗೂ ವಿವಿಧ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಶಾಸಕ ಮಹೇಂದ್ರ ತಮ್ಮಣ್ಣವರ ನೆರವೇರಿಸಿದರು
ಕುಡಚಿ ಗ್ರಾಮದ ವಾರ್ಡನಂ 7ರ ಬಿಚ್ಚು ತೋಟದಲ್ಲಿ ಇರುವ 38ಮನೆಗಳಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ ಮಿಶನ ಯೋಜನೆಯಡಿ ಕುಡಿಯುವ ನೀರು ಒದಗಿಸುವ ಸುಮಾರು 34.39ಲಕ್ಷ ಮೊತ್ತದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಲೋಕೋಪಯೋಗಿ ಇಲಾಖೆಯಡಿ ಈಗಾಗಲೇ ನಿರ್ಮಾಣವಾದ ಕುಡಚಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಎರಡು ಕೊಠಡಿಗಳು, ಕುಡಚಿ ಗ್ರಾಮೀಣ ಭಾಗದ ಮಲ್ಲಾಡಿ ತೋಟದ ಉರ್ದು ಕಿರಿಯ ಪ್ರಾಥಮಿಕ ಶಾಲೆ ಒಂದು ಕೊಠಡಿ, ರವಳು ತೋಟದ ಉರ್ದು ಹಿರಿಯ ಪ್ರಾಥಮಿಕ ಶಾಲೆ ಒಂದು ಕೊಠಡಿ ಹಾಗೂ ಪಿ.ಎಂ.ತೋಟದ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆರ.ಎಂ.ಎಸ.ಎ ಪ್ರೌಢ ಶಾಲೆಯ ಒಂದು ಕೊಠಡಿಯನ್ನು ಉದ್ಘಾಟಿಸುವ ಮೂಲಕ ಶಾಲಾ ಬಳಕೆಗೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ಶಿಕ್ಷಣ ಸಂಯೋಜಕ ಹಣಮಂತ ಬೆನಾಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪವಾರ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿ ಮೈಶಾಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಪುರಸಭೆ ಮಾಜಿ ಉಪಾಧ್ಯಕ್ಷ ಹಮೀದೀನ ರೋಹಿಲೆ, ಪುರಸಭೆ ಸದಸ್ಯರ ಸಾದಿಕ್ ಸಜ್ಜನ, ಸಾದಿಕ್ ರೋಹಿಲೆ, ಮಹಿಬೂಬಪಾಷಾ ಚಮನಶೇಖ, ಆತೀಫ ಪಟಾಯಿತ, ಮುಸ್ತಾಕ್ ಬಾಗಶಿರಾಜ, ಮುಶ್ಪಿಕ ಜಿನ್ನಾಬಡೆ, ಏಜಾಜ್ ಬಿಚ್ಚು, ರವೂಫ್ ಚಮನಮಲಿಕ, ಜಹುರ ರೋಹಿಲೆ, ರಾಜು ನಿಡಗುಂದಿ, ರಾಜು ಗಸ್ತಿ, ಸರ್ಫರಾಜ್ ಕರೀಮಖಾನ, ಬಹಿಲುಲ ರಡ್ಡಿ ಹಾಗೂ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.