ಕುಡಚಿ :ಪಟ್ಟಣದಲ್ಲಿ ದಸರಾ ನಿಮಿತ್ಯ ಅದ್ಧೂರಿಯಾಗಿ ದುರ್ಗಾದೇವಿ ಮೂರ್ತಿ ಪಲ್ಲಕ್ಕಿ ಉತ್ಸವ ಜರುಗಿತು

Share the Post Now

ವರದಿ :ಸಂಜೀವ್ ಬ್ಯಾಕುಡೆ

ಬೆಳಗಾವಿ. ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಈ ವರ್ಷ ನೂತನವಾಗಿ ತರಲಾದ ದುರ್ಗಾದೇವಿ ಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಯಿತು.

ರವಿವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಕಾಳಿಕಾದೇವಿ ಹಾಗೂ ಮೌನೇಶ್ವರ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಸುಮಂಗಲಿಯರು, ಮಕ್ಕಳಿಂದ ಆರತಿಯೊಂದಿಗೆ ಶಹನಾಯಿ ಡೊಳ್ಳು ವಾದ್ಯಗಳೊಂದಿಗೆ ಅಗಸಿ ಬಾಗಿಲು, ಉಗಾರ ಜಮಖಂಡಿ ರಸ್ತೆ ಮೂಲಕ ಚಿಂಚಲಿ ವೃತ್ತ, ಕರ್ನಾಟಕ ವೃತ್ತ ಮೂಲಕ ಜಿಎಲಬಿಸಿ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತಲುಪಿತು.

ನಂತರ ಅರ್ಚಕರಿಂದ ಹಾಗೂ ಏಳು ದಂಪತಿಗಳಿಂದ ಹಲವು ವಿಧಿವಿಧಾನಗಳ ಮೂಲಕ ಪೂಜೆ ನೆರವೇರಿಸಿ ನವಚಂಡಿಕಾ ಹೋಮ ಹವನಾದಿಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ಉತ್ಸವದಲ್ಲಿ ನೆರೆದ ಸದ್ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 5ಗಂಟೆಗೆ ಹಿರಿಯರಾದ ರತ್ನಂಜಯ ಕದ್ದು ಅವರಿಂದ ದೀಪ ಪ್ರಜ್ವಲನೆ ಮೂಲಕ ಘಟಸ್ಥಾಪನೆ ಹಾಗೂ ದುರ್ಗಾಮಾತೆ ಪೂಜಾ ಕೈಂಕರ್ಯವು ನೆರವೇರಿತು.

ಎಂಟು ದಿನ ನಿತ್ಯ ಕಾರ್ವಾಯಕ್ರಮಗಳು



ಸೋಮವಾರ ಸಂಜೆ 7ಗಂಟೆಗೆ ಶಿರಗುಪ್ಪಿಯ ಭಾಗ್ಯಶ್ರೀ ಮಗದುಮ ಇವರಿಂದ ಕೋಲಾಟ ಪ್ರದರ್ಶನ, ಮಂಗಳವಾರ ಹ.ಭ.ಪ. ಸುಭಾಶ್ ಶೇವಾಳೆಯವರಿಂದ ಕೀರ್ತನೆ, ಬುಧುವಾರ ಸಂಜೆ 6ಗಂಟೆಗೆ ಲೇಮನ್ ಸ್ಪೂನ್, 8ಗಂಟೆಗೆ ಅಂತಾರಾಷ್ಟ್ರೀಯ ಕಲಾವಿದ ಜೆ.ಕೆ.ಕಾಡೇಶಕುಮಾರ ಅವರಿಂದ ವಿಶೇಷ ರಸಮಂಜರಿ ಕಾರ್ಯಕ್ರಮ ಜರುಗುವುದು, ಗುರುವಾರ ಸಂಜೆ ರಸೂಲ್ ಮೋಮಿನ ಅವರಿಂದ ವಿವಿಧ ನೃತ್ಯ ಪ್ರದರ್ಶನ, ಶುಕ್ರವಾರ ಸಂಜೆ ಮಕ್ಕಳಿಗೆ ರಸಪ್ರಶ್ನೆ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ, ಶನಿವಾರ ಸಂಜೆ ರಂಗೋಲಿ ಹಾಗೂ ಲೇಜಿಮ ನೃತ್ಯ, ರವಿವಾರ ಸಂಜೆ ರಾಜಯೋಗಿನಿ ಬಿ.ಕೆ. ಶಿವಲೀಲಾ ಅಕ್ಕನವರು ಹಾಗೂ ಬಿ.ಕೆ. ವಿದ್ಯಾ ಅಕ್ಕ ಅವರಿಂದ ದಸರಾ ಕುರಿತು ಪ್ರವಚನ ಜರುಗುವುದು, ಸೋಮವಾರ ಸಂಜೆ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಮೇಶ್ ಪಾಟೀಲ ಅವರಿಂದ ಮಹಾ ಪ್ರಸಾದ ಹಾಗೂ ರಾತ್ರಿ 10ರಿಂದ ಜಾಗರಣೆ ನಿಮಿತ್ಯ ದತ್ತ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗುವುದು.

ದಸರಾ ಕೊನೆಯ ದಿನವಾದ ಮಂಗಳವಾರ ಸಂಜೆ 4ಗಂಟೆಗೆ ವಿಜಯದಶಮಿ ನಿಮಿತ್ಯ ಮೌನೇಶ್ವರ ಹಾಗೂ ಕಾಳಿಕಾ ಮಂದಿರದಿಂದ ಗಣಪತಿ ಮಂದಿರದವರೆಗೆ ದುರ್ಗಾಮಾತೆ ಮೂರ್ತಿ ಹಾಗೂ ಬನ್ನಿ ಮೆರವಣಿಗೆ ಮೂಲಕ ಬನ್ನಿ ಮುಡಿಯುವ ಪೂಜೆಯೊಂದಿಗೆ ದಸರಾ ಉತ್ಸವ ಸಂಪನ್ನಗೊಳ್ಳುವುದು.

ಉತ್ಸವದಲ್ಲಿ ದಯಾನಂದ ಮಠಪತಿ , ಹಿರಿಯರಾದ ರತ್ನಂಜಯ ಕದ್ದು, ವಿನೋದ್ ಮಗದುಮ, ಶಾಂತಾರಾಮ ಸಣ್ಣಕ್ಕಿ, ಲಕ್ಷಟ್ಟಿ ತೇಲಿ, ಮಹಾದೇವ ಚೌಹಾಣ, ಕಾಳಪ್ಪ ಸುತಾರ, ಸಿದ್ದಾನಿ ಸಣ್ಣಕ್ಕಿ, ಶ್ರೀಶೈಲ ದರೂರೆ, ಜಯಕುಮಾರ ಸನದಿ, ಧನ್ಯಕುಮಾರ ಮನಗುತ್ತಿ, ಆನಂದ ಜಗತಾಪ, ಶಿವಕುಮಾರ್ ಸನದಿ, ಶ್ರೀಮಂತ ಗಸ್ತಿ, ದಸರಾ ಉತ್ಸವ ಸಮಿತಿ ಸರ್ವ ಸದಸ್ಯರು ಮಹಿಳೆಯರು,ಕುಮಾರಿಯರು ಯುವಕ ಮಿತ್ರರೂ ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

error: Content is protected !!