ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಸೋಮವಾರ ಮೇ 29 ರಿಂದ ಜೂನ ತಿಂಗಳು 3 ರ ವರೆಗೆ ಕುಡಚಿ ಹೋಬಳಿಯ 31 ಗ್ರಾಮಗಳ ಎಲ್ಲಾ ವರ್ಗದ ರೈತರಿಗೆ ತಾಡಪತ್ರಿ ವಿತರಣೆಯನ್ನು ಮಾಡಲಾಗುವದು
ಒಬ್ಬ ರೈತರಿಂದ ಒಂದೇ ಅರ್ಜಿ ಪಡೆಯಲಾಗುವುದು. ಅರ್ಜಿ ಮತ್ತು ದಾಖಲಾತಿಯನ್ನು ವಿತರಣೆ ದಿನಾಂಕದಂದೇ ತೆಗೆದುಕೊಳ್ಳಲಾಗುವುದು. ಅರ್ಜಿ ನೀಡುವ ರೈತರು ಕಡ್ಡಾಯವಾಗಿ ರೈತರ ನೋಂದಣಿ ಸಂಖ್ಯೆ/ಪೃಟ್ಸ ಐ.ಡಿ. ಹೊಂದಿರಬೇಕು. ಬೇರೆಯವರ ದಾಖಲಾತಿ ಮೇಲೆ ರಾಶಿ ಟಾರ್ಪಲಿನ ನೀಡುವುದಿಲ್ಲ. ಕಳೆದ ಮೂರು ವರ್ಷದಲ್ಲಿ ತಾಡಪತ್ರಿ ಪಡೆದ ರೈತರಿಗೆ ಈ ಬಾರಿ ಅವಕಾಶ ಇರುವುದಿಲ್ಲ ಎಂಬುದು ಗಮನಾರ್ಹ. ವಿತರಣೆ ಮಾಡುವಾಗ ಪ್ರತಿ ದಿನಕ್ಕೆ 120 ರಿಂದ 150 ರೈತರಿಗೆ ವಿತರಿಸಲಾಗುವುದು. ದಾಸ್ತಾನು ಪ್ರಮಾಣಕ್ಕೆ ಅನುಸಾರವಾಗಿ ಎಲ್ಲಾ ಗ್ರಾಮಗಳ ಆಸಕ್ತ ರೈತರಿಗೆ ದೊರಕುವಂತೆ ಮಾಡಲು ಪ್ರತಿ ಗ್ರಾಮವಾರು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸಲಾಗುವುದು.
ಅರ್ಜಿಯ ಜೊತೆಗೆ ರೈತರು ಆಧಾರ್ ಕಾರ್ಡ್ ಜರಾಕ್ಸ, ಭೂಮಿ ಉತಾರ(ಪಹಣಿ) ಹಾಗೂ ಬ್ಯಾಂಕ್ ಪಾಸಬುಕ್ ಜರಾಕ್ಸ ಸಲ್ಲಿಸಿ ರೈತ ಬಾಂದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಡಚಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ವರದಿ:~ಡಾ.ಜಯವೀರ ಎ.ಕೆ*
*ಖೇಮಲಾಪುರ*




