ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆಯ ಪ್ರಕರಣವೊಂದು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಸಿಬ್ಬಂದಿಗೆ ಶ್ಲಾಘನೀಸಿ ಬಹುಮಾನ ವಿತರಿಸಿದ ಮೇಲಾಧಿಕಾರಿಗಳು.
ಕಳೆದ ವರ್ಷ ಕೊನೆಯ ಹಂತದಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಒಂದರಲ್ಲಿ ಒಂದೇ ಕುಟುಂಬದ ನಾಲ್ವರ ದಾರುಣ ಹತ್ಯೆ ಮಾಡಿದ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಸದರಿ ಪ್ರಕರಣದಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ನಿರ್ವಹಿಸಿದ ಉತ್ತಮ ಕಾರ್ಯವನ್ನು ಶ್ಲಾಘಿಸಿ ಕುಡಚಿ ಪೊಲೀಸ್ ಸಿಬ್ಬಂದಿಯಾದ ಪ್ರಕಾಶ ಖವಟಕೊಪ್ಪ ಹಾಗೂ ಆರೀಫ ಮುದ್ನಾಳ ಇವರಿಗೆ ಪೊಲೀಸ್ ಉಪ ಮಹಾನಿರ್ದೇಶಕರು ಪಶ್ಚಿಮ ವಲಯ ಮಂಗಳೂರು ಇವರು ಸಿಬ್ಬಂದಿಯನ್ನು ಶ್ಲಾಘಿಸಿ ತಲಾ ಎರಡು ಸಾವಿರ ರೂಪಾಯಿ ಬಹುಮಾನ ಮಂಜೂರು ಮಾಡುವ ಮೂಲಕ ಪ್ರೋತ್ಸಾಹಿಸಿದ್ದಾರೆ.
ಇವರನ್ನು ಕುಡಚಿ ಪಟ್ಟಣದ 75ನೇ ಸಾರ್ವಜನಿಕ ಗಣರಾಜ್ಯೋತ್ಸವ ಸಮಾರಂಭದಲ್ಲಿ ಉಪ ತಹಶೀಲ್ದಾರ್ ಎಸ.ಜಿ.ದೊಡಮನಿ ಸತ್ಕರಿಸಿ ಗೌರವಿಸಿದರು
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ.ಮಾನೆ, ಡಾ. ಲಕ್ಷ್ಮಣ ಚೌರಿ, ಎ.ಎಸ್.ಐ ಸುರೇಶ್ ಕಲ್ಯಾಣಪೂರಕರ, ಜುನ್ನೇದಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಕ್ಬಾಲ್ ಸತ್ತಾರ, ಕಂದಾಯ ನಿರೀಕ್ಷಕ ರಾಜು ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಐ.ಎನ.ಪಟೇಲ, ಸಿಆರಸಿ ಅಲ್ತಾಫ್ ಬಾಗೆ, ಜಯಕುಮಾರ್ ಸನದಿ ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಭಾಗಿಯಾಗಿದ್ದರು.