ಬೆಳಗಾವಿ,
ವರದಿ :ಸಂಜೀವ್ ಬ್ಯಾಕುಡೆ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪುರಸಭೆ ಮಾಜಿ ಉಪಾಧ್ಯಕ್ಷ ಹಮೀದ್ದೀನ ರೋಹಿಲೆ ಹಾಗೂ ಸದಸ್ಯರು ಮನವಿ ನೀಡಿದರು.
2014-15 ಸಾಲೀನ ನಗರ ಸ್ಥಳೀಯ ನಗರ ಸಂಸ್ಥೆಗಳ ಕಚೇರಿ ಕಟ್ಟಡ ನಿರ್ಮಾಣ ಅನುದಾನದಡಿಯಲ್ಲಿ ನಿರ್ಮಾಣಗೊಂಡ ನೂತನ ಪುರಸಭೆ ಕಚೇರಿ ಕಟ್ಟಡಕ್ಕೆ ಪೀಠೋಪಕರಣ ಖರೀದಿಗೆ ಹಾಗೂ ಇಂಟೀರಿಯರ್ ಡಿಸೈನ ಮಾಡಿಸಲು ರೂ. 70ಲಕ್ಷ , ಪುರಸಭೆ ವ್ಯಾಪ್ತಿಯ ಉಗಾರ-ಜಮಖಂಡಿ ರಸ್ತೆಗೆ ಅಜೀತ ಬಾನೆ ಶಾಲೆಯಿಂದ ರೈಲ್ವೆ ಸೇತುವೆ ವರೆಗೆ, ರೇಲ್ವೇ ಸೇತುವೆಯಿಂದ ಮಾಳಿಂಗರಾಯ ಮಂದಿರದ ವರೆಗೆ ಎರಡು ಬದಿಗೆ ಫೂಟಪಾತ ನಿರ್ಮಾಣ ಮಾಡಲು ಒಂದು ಕೋಟಿ ರೂಪಾಯಿ ಹಾಗೂ ಪಟ್ಟಣದ ಲೋಕೋಪಯೋಗಿ ಇಲಾಖೆಯ ಹೊಸ ಪ್ರವಾಸಿ ಮಂದಿರ ಹೈಟೆಕ್ ಮಾದರಿ ಕಟ್ಟಡ ನಿರ್ಮಾಣ ಮಾಡಲು ಐದು ಕೋಟಿ ರೂಪಾಯಿ ಮೊತ್ತದ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ,ಅಲ್ಲಾವುದ್ದೀನ ರೋಹಿಲೆ, ಪುರಸಭೆ ಸದಸ್ಯರಾದ ಸಾದೀಕ ರೋಹಿಲೆ, ಸಂಜೀವ ರಡರಟ್ಟಿ, ಮಹೀಬೂಬ ಜಾತಗಾರ, ಅಬ್ದುಲಖಾದರ ರೋಹಿಲೆ ಉಪಸ್ಥಿತರಿದ್ದರು.