ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಮಾಜಿ ಶಾಸಕ ಎಸ್ ಬಿ ಘಾಟಗೆಯವರ ಡಾ. ಬಿ ಆರ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಕುಡಚಿ ಮತ್ತು ಎಸ್ ಬಿ ಜಿ ಗ್ರುಪ್ ಪ್ರಸ್ತುತ ಪಡಿಸುತ್ತಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವು ಕುಡಚಿ ಪಟ್ಟಣದ ಅಜೀತ ಬಾನೆ ಶಾಲಾ ಆವರಣದಲ್ಲಿ 3 ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರುಗಲಿದೆ.
ಗುರುವಾರ ದಿನಾಂಕ 4 ರಂದು ಮುಂಜಾನೆ 11 ಗಂಟೆಗೆ ಲವ್ ಡೇಲ್ ಇಂಟರ್ನ್ಯಾಷನಲ್ ಶಾಲಾ ಮಕ್ಕಳಿಂದ ಆಹಾರ ಮೇಳ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಅಜೀತ ಬಾನೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಂದ ಸಂತೆ ಮೇಳ ಹಾಗೂ ಸಂಜೆ 6 ಗಂಟೆಗೆ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ.
ಕೊನೆಯ ದಿನವಾದ ಶನಿವಾರ ಸಂಜೆ 4 ಗಂಟೆಗೆ 2023-24 ಸಾಲೀನ ಎಸ್ ಬಿ ಜಿ ಗ್ರುಪ್ ಅವಾರ್ಡ್ ವಿತರಣೆ ಹಾಗೂ ಮನರಂಜನೆಗಳು ಜರಗುವವು ಈ ಎಲ್ಲ ಕಾರ್ಯಕ್ರಮಗಳ ಉದ್ಘಾಟಕರಾಗಿ ಅತಿಥಿಗಳಾಗಿ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಎ.ಎಸ.ಕಾಂಬಳೆ ಹಾಗೂ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಉಸ್ತುವಾರಿ ಬಾಬಾಲಾಲ ಪಿನಿತೋಡ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಎಸ.ಪಾಟೀಲ, ಹೊಸ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎಂ.ಎಸ.ಟೊಣ್ಣೆ, ಲವಡೆಲ್ಲ ಇಂಟರ್ನ್ಯಾಷನಲ್ ಶಾಲೆ ಮುಖ್ಯೋಪಾಧ್ಯಾಯ ಆಶಾ ಗಾಡಿವಡ್ಡರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





