ವರದಿ: ಸಂಜೀವ ಬ್ಯಾಕುಡೆ, ಕುಡಚಿ
ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹಜರತ ಮಾಸಾಹೇಬಾ ವೃತ್ತದಲ್ಲಿ ಎಸಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದರು.
ರಾಜ್ಯ ಸಭೆಯಲ್ಲಿ ಮಂಡಿಸಿರುವ 2024ರ ವಕ್ಫ್ ವಿಧೇಯಕವನ್ನು ವಿರೋಧಿಸಿ ಎಸ್‌ಡಿಪಿ ಐ ಬೆಳಗಾವಿ ಜಿಲ್ಲಾ ಕೋಶಾಧಿಕಾರಿ ಅಸ್ಲಂ ಹಳಿಯಾಳ ನೇತೃತ್ವದಲ್ಲಿ ವಿಧೇಯಕದ ಪ್ರತಿಯನ್ನು ಹರಿಯುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಬೆಳಗಾವಿ ಜಿಲ್ಲಾ ಕೋಶಾಧಿಕಾರಿ ಅಸ್ಲಂ ಹಳಿಯಾಳ, ಮಸೂದೆಯನ್ನು ತೀವ್ರವಾಗಿ ವಿರೋಧಿಸಿ, ಇದು ಅಸಾಂವಿಧಾನಿಕ ಮಾತ್ರವಲ್ಲ, ವಕ್ಫ ಆಸ್ತಿಯನ್ನು ವಶಪಡಿಸಿಕೊಳ್ಳುವ ಕೋಮುವಾದಿ ಸರ್ಕಾರದ ಕ್ರಮವಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು ಸಂಪೂರ್ಣ ಅನ್ಯಾಯ ಮತ್ತು ಸಂವಿಧಾನ ಬಾಹಿರ ಎಂದು ಅವರು ಹೇಳಿದರು.
ಈ ಮಸೂದೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಸಿಎಎ ಮತ್ತು ಎನ್‌ಆರ್‌ಸಿ ಮಾದರಿಯ ಬೃಹತ್ ಪ್ರತಿಭಟನೆಗಳನ್ನು ದೇಶಾದ್ಯಂತ ನಡೆಸಲಾಗುವುದು ಎಂದು ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
”ಭಾರತದ ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳು ಮತ್ತು ವಕ್ಫ ಅಸ್ತಿಗಳನ್ನು ರಕ್ಷಿಸಲು ನಾವು ಇಂದು ಇಲ್ಲಿದ್ದೇವೆ. ಮೋದಿ ಸರ್ಕಾರವು ಈ ಮಸೂದೆಯ ಮೂಲಕ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾದ ಹಿಂದುತ್ವದ ಆದರ್ಶಗಳನ್ನು ವಕ್ಫ ಮಂಡಳಿಯ ಮೇಲೆ ಹೇರಲು ಪ್ರಯತ್ನಿಸುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವಕ್ಫ ಕಾನೂನನ್ನು ಜಾರಿಗೊಳಿಸಲು ತನ್ನ ಬಹುಮತವನ್ನು ದುರುಪಯೋಗಪಡಿಸಿಕೊಂಡು ಮತ್ತು ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ತಿದ್ದುಪಡಿಯ ಹಿಂದಿನ ನಿಜವಾದ ಉದ್ದೇಶವಾಗಿದೆ.
ಈ ಮಸೂದೆಯು ನೇರವಾಗಿ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ದಾಳಿ ಮಾಡುತ್ತದೆ ಮತ್ತು ವಕ್ಫ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ.
ಪ್ರಸ್ತುತ ಕಾನೂನುಗಳು ಹಿಂದೂಗಳಲ್ಲದವರು ಹಿಂದೂ ಧಾರ್ಮಿಕ ಆಸ್ತಿಗಳ ನಿರ್ವಹಣೆಯನ್ನು ನಿಷೇಧಿಸುತ್ತವೆ, ಆದರೆ ಹೊಸ ವಕ್ಫ ತಿದ್ದುಪಡಿಯ ಅಡಿಯಲ್ಲಿ, ಸಿಇಒ ಸೇರಿದಂತೆ ಬಹುತೇಕ ವಕ್ಫ ಮಂಡಳಿಯ ಸದಸ್ಯರು ಮುಸ್ಲಿಮರಾಗಿರಬೇಕು ಅಗತ್ಯವಿಲ್ಲ. ಇದು ವಕ್ಸ್ ಆಡಳಿತವನ್ನು ಹೈಜಾಕ್ ಮಾಡುವ ಹಂಚಲಾಗಿದೆ ಎಂದು ಹೇಳಿದರು
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಕುಡಚಿ ಸಮಿತಿ ಉಪಾಧ್ಯಕ್ಷ ನವೀದ್ ಜಿನಾಬಡೆ,
ಕಾರ್ಯದರ್ಶಿ ಮುಸ್ತಕೀಮ ಖಾಜಿ, ಖಜಾಂಚಿ ವಾಹೀದ ಓಮನೆ, ಡಿಡಬ್ಲುಸಿ ಸದಸ್ಯರ ಮುಫ್ತಿ ವಸಿಯುಲ್ಲಾ ಸೇರಿದಂತೆ ಎಸ್‌ಡಿಪಿಐ ಕಾರ್ಯಕರ್ತರು ಹಾಗೂ ಇತರರು ಭಾಗವಹಿಸಿದ್ದರು.