ಬೆಳಗಾವಿ.
ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದ ಸುನೀಲ ಗುಡೋಡಗಿ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ ಜರುಗಿದ ಆರನೇ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ದೇಶಕ್ಕೆ ಬೆಳ್ಳಿ ಪದಕ ತಂದುಕೊಡುವ ಮೂಲಕ ಗ್ರಾಮಕ್ಕೆ ರಾಜ್ಯಕ್ಕೆ ಕೀರ್ತಿ ತಂದ ಖೇಮಲಾಪೂರ ಗ್ರಾಮದ ಹೆಮ್ಮೆಯ ಪುತ್ರ ಸುನೀಲ್ ಗುಡೋಡಗಿ ಇವರನ್ನು ಗ್ರಾಮದ ಆಕಾಶ ಎಲೆಕ್ಟ್ರಿಕಲ್ಸ ಮಾಲೀಕ ರವಿ ಚೌಗಲಾ, ಬಿಜೆಪಿ ಕುಡಚಿ ಮಂಡಲದ ಅಧ್ಯಕ್ಷ ಶ್ರೀಧರ ಮೂಡಲಗಿ ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ ಸತ್ಕರಿಸಿ ಗೌರವಿಸಿದರು.
ಸಮಾಜ ಸೇವೆಯಲ್ಲಿ, ಯುವಕರಿಗೆ ಪ್ರೋತ್ಸಾಹ ನೀಡುವಲ್ಲಿ ಸದಾ ಮುಂಚೂಣಿಯಲ್ಲಿ ಇರುವ ಗ್ರಾಮದ ಆಕಾಶ ಎಲೇಕ್ಟ್ರಿಕಲ್ಸ ಮಾಲೀಕ ರವಿ ಚೌಗಲಾ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನೀಲಗೌಡ ಪಾಟೀಲ, ನಂದ್ಯಪ್ಪ ಚಿಟ್ಟಿ, ಮಲ್ಲಿಕಾರ್ಜುನ ಪಾಲಬಾಂವಿ, ಸಿದ್ದು ಬೆಳಗಲಿ, ರಾಜು ಬಡಿಗೇರ, ಈರಪ್ಪ ಸಂಕೋಣಟ್ಟಿ, ಮೃತ್ಯುಂಜಯ ಮಠಪತಿ, ಬಸವರಾಜ ನವಲ್ಯಾಳ, ಸಿದ್ದು ದುಪದಾಳ, ಅಶೋಕ ಗುಡೋಡಗಿ, ಮಲಕಾರಿ ದಳವಾಯಿ, ಶಿವು ಕತ್ತಿ, ಸಿದ್ದು ಮಿರ್ಜಿ, ಅಶೋಕ ಶಿರಹಟ್ಟಿ ಹಾಗೂ ಖೇಮಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.