ಬೆಳಗಾವಿ.
ಜಿಲ್ಲಾ ಮಟ್ಟದ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ ಆದಿನಾಥ ಮಲಾಜೆ.
ಇದೇ ನವೆಂಬರ್ 20ರಂದು ಚಿಕ್ಕೋಡಿಯಲ್ಲಿ ಜರುಗಿದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಥಳದಲ್ಲಿ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದ ಶ್ರೀ ವಿದ್ಯಾಲಯ ಚಿತ್ರಕಲಾ ಶಿಕ್ಷಕ ಆದಿನಾಥ ಮಲಾಜೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು, ನಿರ್ಣಾಯಕರು ಪ್ರಮಾಣ ಪತ್ರ ವಿತರಣೆ ಮಾಡುವ ಮೂಲಕ ಗೌರವಿಸಿ ಅಭಿನಂದಿಸಿದರು.