ಬೆಳಗಾವಿ. ಕುಡಚಿ.
ಜನರು ಎಲ್ಲಿಯವರೆಗೆ ಶೈಕ್ಷಣಿಕವಾಗಿ ಜಾಗೃತರಾಗುವುದಿಲ್ಲವೊ ಅಲ್ಲಿಯವರೆಗೆ ಭಾರತ ದೇಶದ ಭವಿಷ್ಯ ಉಜ್ವಲವಾಗುದಿಲ್ಲ ಎಂದು ಕವಲಗುಡ್ಡದ ಅಮೋಘಸಿದ್ದೇಶ್ವರ ಸಿದ್ದಾಶ್ರಮ ಶ್ರೀ ಅಮರೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಅವರು ಸ್ಥಳಿಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾ.ಪಂ ಮಹಾತ್ಮ ಗಾಂಧಿ ಸಭಾಭವನ ಉದ್ಘಾಟನಾ ಕಾರ್ಯಕ್ರದಲ್ಲಿ ದಿವ್ಯ ಸಾನಿದ್ಯ ವಹಿಸಿ ಆರ್ಶಿವಚನ ನೀಡಿದರು.
ತಾ.ಪಂ ಇ.ಓ ವಿಠ್ಠಲ ಚಂದರಗಿ ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿ ಗ್ರಾಮ ಪಂಚಾಯತಿಗಳು ಸರ್ವಾಂಗಿನ ಸದಸ್ಯರ ಹಾಗೂ ಗ್ರಾಮಸ್ಥರು ಸಹಕಾರ ಬಹಳ ಮುಖ್ಯ ಎಂದು ಹೇಳಿದರು.
ಕೆ.ಎಲ್.ಇ ಕಾಲೇಜಿನ ನಿವೃತ ಪ್ರಧ್ಯಾಪಕ ಹನಮಂತ ಗುರವ ಮಾತನಾಡಿ ಇಂದಿನ ಯುವಕರು ಮೋಬೈಲ್‌ದಿಂದ ಪುಸ್ತಕ ಓದುವುದು ಕಡಿಮೆಯಾಗಿದೆ ಗ್ರಾಮದಲ್ಲಿನ ವಿದ್ಯಾರ್ಥಿಗಳು ಪುಸ್ತಕ ಓದುವುದು ರೂಡಿಮಾಡಿಕೊಳ್ಳಬೇಕು ವಿದ್ಯಾರ್ಥಿಳಲ್ಲಿ ಓದುವ ಅಭಿರುಚಿ ಹೆಚ್ಚಸಲು ಗ್ರಾಮ ಪಂಚಾಯತಿಯವರು ಗ್ರಾಮದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ನಿರ್ಮಣ ಮಾಡಿದ್ದಾರೆ ಗ್ರಂಥಾಲಯ ಸದುಪುಯೊಗ ಪಡೆದುಕೊಳ್ಳಬೇಕು ಎಂದರು
ಗ್ರಾ.ಪಂ ಅಧ್ಯಕ್ಷ ಕುಮಾರ ಬನಶಂಕರಿ ಅಧ್ಯಕ್ಷತೆ ವಹಿಸದ್ದರು ಉಪಾಧ್ಯಕ್ಷ ವಿಧ್ಯಾಶ್ರಿ ಹಂಜೆ, ಮಾಜಿ ಜಿ.ಪಂ ಸದಸ್ಯ ಮಹಾದೇವ ಶಿರಗೂರೆ, ಮಾಜಿ ತಾ.ಪಂ ಸದಸ್ಯ ಹಣಮಂತ ನಾಯಿಕ ಗ್ರಾ.ಪಂ ಸದಸ್ಯರು ಶಿಕ್ಷಕರು ವಿದ್ಯಾರ್ಥಿಗಳು ಮುಂತಾದವರು ಹಾಜರಿದ್ದರು.
ಮಾಜಿ ಕುಡಚಿ ಬ್ಲಾಕ್ ಕಾಂಗ್ರೇಶ ಅಧ್ಯಕ್ಷ ರೇವಣ್ಣ ಸರವ ಸ್ವಾಗತಿಸಿದರು ಶಿಕ್ಷಕ ಗುರು ಮಠಪತಿ ನಿರೂಪಿಸಿದರು. ಪಿ.ಡಿ.ಓ ಶಶಿಧರ ಮಾಲಗಾರ ವಂದಿಸಿದರು.