ಕುಡಚಿ:ಕೇಂದ್ರ ಗೃಹ ಸಚಿವ ಅಮೀತ ಶಾ ವಜಾಗೊಳಿಸುವಂತೆ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Share the Post Now

ಬೆಳಗಾವಿ.


ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮೀತ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕುಡಚಿ ಪಟ್ಟಣದ ಡಿ.ಎಸ್.ಎಸ. , ದಲಿತ ಪ್ಯಾಂಥರ್ಸ್ ಹಾಗೂ ಎಸಡಿಪಿಐ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಮಾಸಾಹೇಬಿ ವೃತ್ತದಲ್ಲಿ ಸಂಘಟನೆಗಳ ಮುಖಂಡರಿಂದ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಭಾರತ ಸಂವಿಧಾನ ಜಾರಿಯಾಗಿ 75 ವರ್ಷಗಳ ಸುವರ್ಣ ಸಂಭ್ರಮ ಘಟಿಸಿದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಒತ್ತಾಯ- ಕೈ ಸಂಸತ್ತಿನ ಉಭಯ ಸದನದಲ್ಲಿ ಸಂವಿಧಾನ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ರಾಜಸಭೆಯಲ್ಲಿ ಕೆಂದ್ರದ ಗೃಹ ಸಚಿವ ಅಮೀತ ಶಾ ಅವರು ಡಾ. ಅಂಬೇಡ್ಕರ್ ಕುರಿತಾಗಿ ಮಾತನಾಡುವಾಗ, ಅಂಬೇಡ್ಕರ್, ಅಂಬೇಡ್ಕರ್, ಎನ್ನುವ ಪದ ಕಾಂಗ್ರೆಸ್ ನವರಿಗೆ ವ್ಯಸನವಾಗಿ ಬಿಟ್ಟಿದೆ. ಬದಲಾಗಿ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮಕ್ಕೆ ಆಗುವಷ್ಟು ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿರುವುದು ಖಂಡನಾರ್ಹ, ಅಲ್ಲದೇ ಅವರೊಬ್ಬ ಸಂವಿಧಾನ ವಿರೋಧಿ ಎಂಬುವುದನ್ನು ಸಾಭಿತುಪಡಿಸಿದ್ದಾರೆ.ಅಂಬೇಡ್ಕರ್ ಬರೆದ ಸಂವಿದಾನದ ಆಧಾರದ ಮೇಲೆ ಕೇಂದ್ರ ಸಚಿವ ಆಗಿರುವ ಶಾ ಅವರು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿರುವುದು ದೇಶ ವಿರೋಧಿ ಕೃತ್ಯವಾಗಿದೆ. ಕೂಡಲೇ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಬಿಜೆಪಿ ಮುರ್ದಾಬಾದ, ಆರ್.ಎಸ.ಎಸ.ಮುರ್ದಾಬಾದ, ಬಜರಂಗದಳ ಮುರ್ದಾಬಾದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಉಪತಹಶೀಲ್ದಾರ್ ಎಸ್.ಜಿ. ದೊಡಮನಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ಯಾಂಥರ್ಸ್ ಪ್ರಸಾದ ಶಿಂಗೆ, ಎಸಡಿಪಿಐ ಅಸ್ಲಂ ಹಲ್ಯಾಳ, ಡಿಎಸ್ಎಸ ಅಮೀನ್ ಜಾತಗಾರ, ಮುಸ್ತಖೈಮ ಖಾಜಿ ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಪಿಎಸ್ಐ ಪ್ರೀತಮ ನಾಯಿಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!