ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಲಯಟ್ಟದ ಕ್ರೀಡಾಕೂಟಗಳು ಜರುಗಿದವು.
ಕುಡಚಿ ಪಟ್ಟಣದ ಶಾಸಕರ ಮಾದರಿ ಶಾಲೆ, ಜುನ್ನೇದಿಯಾ ಪ್ರೌಢ ಶಾಲೆ ಹಾಗೂ ಅಜಿತ್ ಬಾನೆ ಶಾಲಾ ಆವರಣದಲ್ಲಿ ಕುಡಚಿ ವಲದಲ್ಲಿ ಬರುವ ಕುಡಚಿ ಪಟ್ಟಣ, ಗ್ರಾಮೀಣ, ಚಿಂಚಲಿ, ನಿಲಜಿ, ಪರಮಾನಂದವಾಡಿ ಹಾಗೂ ಖೇಮಲಾಪೂರ ಒಟ್ಟು ಆರು ಕ್ಲಸ್ಟರಗಳ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಜುನ್ನೇದಿಯಾ ಪ್ರೌಢ ಶಾಲಾ ಆವರಣದಲ್ಲಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ರಿಲೇ, ಇತರೆ ವೈಯಕ್ತಿಕ ಆಟಗಳು ಜರುಗಿದರೆ, ಅಜೀತ ಬಾನೆ ಶಾಲಾ ಆವರಣದಲ್ಲಿ ಕಬ್ಬಡ್ಡಿ, ಖೋಖೋ, ವ್ಹಾಲಿಬಾಲ್ ಸೇರಿದಂತೆ ಗುಂಪು ಆಟಗಳು ಜರುಗಿದವು. ಕ್ರೀಡಾಪಟುಗಳಲ್ಲಿ ಆರು ಕ್ಲಸ್ಟರಗಳ ಕ್ರೀಡಾಪಟುಗಳು, ದೈಹಿಕ ಶಿಕ್ಷಕರು, ಪಾಲಕರು ಭಾಗಿಯಾಗಿದ್ದರು.