ಕೊಪ್ಪಳ: ಚುನಾವಣಾ ಕಾರ್ಯದಲ್ಲಿ ಸುಡು ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ನಿರ್ಜಲೀಕರಣ (ಡಿ ಹೈಡ್ರೇಷನ್) ಆಗದಿರಲೆಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಔಷಧ ವ್ಯಾಪಾರಿಗಳು ಓ.ಆರ್.ಎಸ್.ಪೌಡರ್ ಮತ್ತು ಲಿಕ್ವಿಡ್ ಬಾಟಲ್ ಗಳನ್ನು ವಿತರಿಸಿದರು.
ಔಷಧ ವ್ಯಾಪಾರಿಗಳಾದ ಹನುಮಸಾಗರ ಪಟ್ಟಣದ ಬನಶಂಕರಿ ಮೆಡಿಕಲ್ ಸ್ಟೋರ್ಸನ ಶ್ರೀಧರ ಮತ್ತು ನಿಲೋಗಲ್ ಗ್ರಾಮದ ಸಂಜೀವಿನಿ ಮೆಡಿಕಲ್ ಸ್ಟೋರ್ಸನ ನಾಗರಾಜ ರಡ್ಡೇರ ಹನುಮಸಾಗರದ ಪೋಲೀಸ್ ಠಾಣೆಗೆ ತೆರಳಿ, ಓ.ಆರ್.ಎಸ್.ಪೌಡರ್ ಮತ್ತು ಲಿಕ್ವಿಡ್ ಗಳನ್ನು ನೀಡಿದರು
ಎ.ಎಸ್.ಐ.,ರಾಮನಗೌಡ,ಪೋಲೀಸ್ ಪೇದೆಗಳಾದ ಕಳಕನಗೌಡ ಮತ್ತು ಶಬ್ಬೀರ್ ಪಿ.ಸಿ.ಉಪಸ್ಥಿತರಿದ್ದರು. ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಔಷಧ ವ್ಯಾಪಾರಿಗಳನ್ನು ಅಭಿನಂದಿಸಿದ್ದಾರೆ.





