ನಸಲಾಪುರದಲ್ಲಿ ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ನಿಮಿತ್ಯ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ಜನಸ್ತೋಮ.

Share the Post Now

ರಾಯಬಾಗ.ಬಾವನಸೌಂದತ್ತಿ:
ಶಾಂತಿಸಾಗರ ಮುನಿ ಮಹಾರಾಜರು ನಸಲಾಪೂರ ಗ್ರಾಮದಲ್ಲಿ ಚಾತುರ್ಮಾಸ ಕಾರ್ಯಕ್ರಮ ಮಾಡಿ 104 ವರ್ಷ ಆಗಿದ್ದು ಸಂತಸದ ವಿಷಯ ಎಂದು ಬಾಲಾಚಾರ್ಯ ಡಾ.108 ಸಿದ್ಧಸೇನ ಮುನಿ ಮಹಾರಾಜರ ಹೇಳಿದರು.


ಸಮೀಪದ ನಸಲಾಪೂರ ಗ್ರಾಮದಲ್ಲಿ ಪಾವನ ವರ್ಷಯೋಗ ಚಾತುರ್ಮಾಸ ಕಮಿಟಿ ವತಿಯಿಂದ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ನಿಮಿತ್ಯ ಶಾಂತಿಸಾಗರ ಮಹಾರಾಜರ ಚರಣದ ಅಭಿಷೇಕಕ್ಕೆ  ಸಾನಿಧ್ಯ ವಹಿಸಿ ಮಾತನಾಡಿದರು.

ಶಾಂತಿಸಾಗರ ಮಹಾರಾಜರು
1919 ರಲ್ಲಿ ಪವಿತ್ರ ಚತುರ್ಮಾಸ ನಸಲಾಪೂರದಲ್ಲಿ ನಡೆದಿತ್ತು.   ಈ ಭೂಮಿಯಲ್ಲಿ ಚತುರ್ಮಾಸು ಮಾಡಿ  ಗ್ರಾಮಕ್ಕೆ ಉಪದೇಶ ಮಾಡಿ ಅಹಿಂಸಾ ಮಾರ್ಗದಲ್ಲಿ ನಡೆಯುವಂತೆ ಬೋಧಿಸಿ, ಧರ್ಮಪಾಲನೆ ಮಾಡಿದ್ದು ಈ ಗ್ರಾಮದ ಪುಣ್ಯವಿದೆ ಎಂದರು.


ಬ್ರಿಟಿಷ್ ಸರ್ಕಾರದಲ್ಲಿ ಮುನಿಗಳಿಗೆ ವಿಹಾರ ಮಾಡಲು ಅನುಮತಿ ಇರಲಿಲ್ಲ. ಇವರ ತತ್ವ ತ್ಯಾಗ ಮತ್ತು ಕಠಿಣ ಉಪವಾಸ ನೋಡಿ ಬ್ರಿಟಿಷರು ಅನುಮತಿ ಕೊಟ್ಟರು. ಆದ್ದರಿಂದ ಇಂದಿಗೂ ಜೈನ ಮುನಿಗಳ ವಿಹಾರ ಆಹಾರ ಹೀಗೆ ನಡೆಯುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.


ಗೊಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಎನ್ ಎ ಮಗದುಮ ಮಾತನಾಡಿ, ಗ್ರಾಮದಲ್ಲಿ ಶಾಂತಿಸಾಗರ ಮುನಿಗಳ ಮಾಡಿದಂತ ಚಾತುರ್ಮಾಸ  ಸ್ಥಳವನ್ನು ಪ್ರವಾಸಿ ತಾಣವಾಗಿ ಎಲ್ಲಾ ಗ್ರಾಮಸ್ಥರು ಶ್ರಮದಿಂದ ಸಹಕಾರದಿಂದ ಒಗ್ಗಟ್ಟಿನಿಂದ ಸೇರಿ 108 ಸಿದ್ಧಿ ಸೇನೆ ಮುನಿ ಮಹಾರಾಜರ ಅವರ ಸಾನಿಧ್ಯದಲ್ಲಿ  ಮಾಡೋಣ ಎಂದು  ಹೇಳಿದರು.
ಈ ಸಂದರ್ಭದಲ್ಲಿ 24 ತೀರ್ಥಂಕರಿಗೆ 24 ಟ್ರ್ಯಾಕ್ಟರಗಳಲ್ಲಿ  ಭಾವಚಿತ್ರಗಳ ಗ್ರಾಮದ ಪ್ರಮುಖ ಬೀದಿಯಿಂದ  ಭವ್ಯ ಮೆರವಣಿಗೆ ನಡೆಯಿತು. ಈ ಮೆರವಣಿಗೆ ಚೌಗೌಡಾ ಪಾಟೀಲ ಹಾಗೂ ವೆಂಕಟೇಶ ಬನವಣೆ  ಚಾಲನೆ ನೀಡಿದರು. ಭರತ ಪಾಟೀಲ, ಅಭಯ ಪಾಟೀಲ, ರಾಜು ಪಾಟೀಲ ಇವರ ಹಸ್ತದಿಂದ ಅಭಿಷೇಕ ನಡಯತು -ಸುನಿಲ ಉಪಾಧ್ಯೆ, ತಮ್ಮಣಿ ಉಪಾಧ್ಯೆ ಇವರಿಂದ ಗ್ರಾಮದ ಹೊರವಲಯದಲ್ಲಿ ಇರುವ ಶಾಂತಿಸಾಗರ ಮಹಾರಾಜರ ಚರಣಕ್ಕೆ ಅಭಿಷೇಕದ ವಿಧಿ ವಿಧಾನ ನಡೆಯಿತು.


ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಸಮಾಜೆ, ರಾಜು ಪರಮಾಜೆ, ಮಹಾವೀರ ಪರಮಾಜೆ, ಮಹಾವೀರ ಸಮಾಜೆ, ನೇಮು ಸಮಾಜೆ, ಕುಮಾರ ಕಾಗವಾಡೆ, ಶರತ್ ಪಾಟೀಲ, ಡಾ. ಸಂಜಯ ಪಾಟೀಲ, ಕಿರಣ ಸಮಾಜೆ, ಬಾಹುಬಲಿ ಪರಮಾಜೆ, ಸುದರ್ಶನ ಮೆಳವಂಕಿ, ಅಪ್ಪಾಸಾಹೇಬ ಪಾಟೀಲ ಜೈನ ಶ್ರಾವಕ ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತದ್ದರು.

Leave a Comment

Your email address will not be published. Required fields are marked *

error: Content is protected !!