chatrapati shjivaji maharaja

ಛತ್ರಪತಿ ಶಿವಾಜಿ ಮಹಾರಾಜರ ಪಾದತಳದಲ್ಲಿ ಭಾವುಕರಾದ ಲಕ್ಷ್ಮೀ ಹೆಬ್ಬಾಳಕರ್

Share the Post Now

ಶಿವ ಜಯಂತಿ ನಿಮಿತ್ತ ರಾಜಹಂಸಗಡ ಕೋಟೆಗೆ ತೆರಳಿ ನಮನ ಸಲ್ಲಿಸಿದ ಶಾಸಕಿ

ಬೆಳಗಾವಿ: ಹಿಂದವೀ ಸ್ವರಾಜ್ ಸಂಸ್ಥಾಪಕ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ಶನಿವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆಗೆ ತೆರಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಬೃಹದಾಕಾರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಭಕ್ತಿಪೂರ್ವಕ‌ ನಮನಗಳನ್ನು‌ ಸಲ್ಲಿಸಿದರು.

ಶಾಸಕರಾದ ನಂತರ ರಾಜಹಂಸಗಡ ಕೋಟೆಯಲ್ಲಿ ದೇಶದಲ್ಲೇ ಬೃಹತ್ತಾದ ಛತ್ರಪತಿ ಶಿವಾಜಿ ಮೂರ್ತಿ ಸ್ಥಾಪಿಸಬೇಕೆನ್ನುವ ಕನಸು ಹೊತ್ತು, ಕಷ್ಟ, ಕೋಟಲೆಗಳನ್ನು ಎದುರಿಸಿ ತಮ್ಮ ಛಲ ಸಾಧಿಸಿದ ಲಕ್ಷ್ಮೀ ಹೆಬ್ಬಾಳಕರ್, ಅದೇ ಸ್ಥಳಕ್ಕೆ ತೆರಳಿ ಇಂದು ಶಿವಾಜಿ ಮಹಾರಾಜರಿಗೆ ಗೌರವ ಸಲ್ಲಿಸುವಾಗ ಗದ್ಗದಿತರಾದರು. ಶಿವಾಜಿಯ ಪಾದಗಳಿಗೆ ವಂದಿಸಿ ಧನ್ಯತಾಭಾವ ಮೆರೆದರು. ತಮ್ಮ ಜೀವನದಲ್ಲಿ ಇಂತಹ ಅವಿಸ್ಮರಣೀಯ ಕಾರ್ಯ ನೆರವೇರಿಸುವ ಭಾಗ್ಯ ಸಿಕ್ಕಿದ್ದಕ್ಕಾಗಿ ಸಾರ್ಥಕತೆಯ ಕ್ಷಣಗಳನ್ನು ಅನುಭವಿಸಿದರು. ಶಿವಾಜಿ ಮೂರ್ತಿ ಸ್ಥಾಪಿಸಬೇಕೆನ್ನುವ ಯೋಚನೆ ಬಂದಾಗಿನಿಂದ ಅದು ಈಡೇರುವವರೆಗೆ ತಾವು ಸವೆಸಿದ ಹಾದಿಯನ್ನು ಅಲ್ಲಿ ಸೇರಿದ್ದ ಜನರೆದುರು ಹಂಚಿಕೊಂಡು ಭಾವಪರವಶರಾದರು. ಅವರಿಗೆ ಅರಿವಿಲ್ಲದೆ ಅವರ ಕಣ್ಣಿನಿಂದ ಆನಂದ ಭಾಷ್ಪಗಳು ಸುರಿದವು.

ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮಗಳು, ದಿಟ್ಟ ಹೋರಾಟ ಹಾಗೂ ಅವರ ಸಾಧನೆಗಳು ಸದಾಕಾಲವೂ ಆದರ್ಶಮಯ. ಇಲ್ಲಿನ ಅತ್ಯಂತ ಸುಂದರವಾದ ಮೂರ್ತಿ ನಮ್ಮ ಮುಂದಿನ ಪೀಳಿಗೆಗೆ ಸದಾ ಸ್ಪೂರ್ತಿದಾಯಕವಾಗಿರುತ್ತವೆ ಎನ್ನುವ ಆಶಾಭಾವ ಹೊಂದಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.
ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿರುವ ರಾಜಹಂಸಗಡದಲ್ಲಿ ಶಿವಜಯಂತಿ ನಿಮಿತ್ತ ಶನಿವಾರವೂ ಪ್ರವಾಸಿಗರ ದಂಡೇ ಹರಿದುಬಂದಿತ್ತು.

Leave a Comment

Your email address will not be published. Required fields are marked *

error: Content is protected !!